Home » “ಸೆಕ್ಸ್ ಒಂದು ಅತ್ಯುತ್ತಮ ವ್ಯಾಯಾಮ, ಇದು ನನ್ನ ಕ್ಯಾಲರಿ ಕರಗಿಸಲು ಸಹಕಾರಿ” ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಪತ್ನಿ ಹೇಳಿಕೆ !!!

“ಸೆಕ್ಸ್ ಒಂದು ಅತ್ಯುತ್ತಮ ವ್ಯಾಯಾಮ, ಇದು ನನ್ನ ಕ್ಯಾಲರಿ ಕರಗಿಸಲು ಸಹಕಾರಿ” ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಪತ್ನಿ ಹೇಳಿಕೆ !!!

by Mallika
0 comments

ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಅವರ ಪತ್ನಿ ತಾಹಿರಾ ಕಶ್ಯಪ್ ತನ್ನ ಲೈಂಗಿಕ ಜೀವನದ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ. ನಟಿ ಶಿಲ್ಪಾ ಶೆಟ್ಟಿ ನಡೆಸಿಕೊಡುತ್ತಿರುವ ಶೆಫ್ ಆಫ್ ಯು ಕಾರ್ಯಕ್ರಮದಲ್ಲಿ ಸೆಕ್ಸ್ ಬೆಸ್ಟ್ ವರ್ಕೌಟ್ ಎಂಬ ಹೇಳಿಕೆ ನೀಡಿದ್ದು, ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಕೇವಲ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಆಧರಿಸಿದ ಶೇಪ್ ಆಫ್ ಯು ಎಂಬ ಕಾರ್ಯಕ್ರಮವನ್ನು ಶಿಲ್ಪಾ ಶೆಟ್ಟಿ ಹೋಸ್ಟ್ ಮಾಡುತ್ತಿದ್ದಾರೆ. ಕಾರ್ಯಕ್ರಮಕ್ಕೆ ಅವರ ಇತ್ತೀಚಿನ ಅತಿಥಿಯಾಗಿ ಆಯುಷ್ಮಾನ್ ಖುರಾನಾ ಅವರ ಪತ್ನಿ ತಾಹಿರಾ ಕಶ್ಯಪ್ ಬಂದಿದ್ದರು.

ತಾಹಿರಾ ತನ್ನ ಲೈಂಗಿಕ ಜೀವನದ ಬಗ್ಗೆ ಮಾತನಾಡುತ್ತಾ “ಇದು ಅತ್ಯುತ್ತಮ ವ್ಯಾಯಾಮ, ಸೆಕ್ಸ್ ನನ್ನ ಕ್ಯಾಲೋರಿಗಳನ್ನು ಕರಗಿಸಲು ಸಹಕಾರಿಯಾಗಿದೆ ” ಎಂದು ಮುಕ್ತವಾಗಿ ಹೇಳಿದ್ದಾರೆ. ಇದಕ್ಕೆ ಶಿಲ್ಪಾ ಶೆಟ್ಟಿ ಆಯುಷ್ಮಾನ್, ನೀವು ಕೇಳಿಸಿಕೊಳ್ಳುತ್ತಿದ್ದೀರಾ..? ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಮಿರ್ಚಿಯ ಶೇಪ್ ಆಫ್ ಯುನ ಇತ್ತೀಚಿನ ಸಂಚಿಕೆಯಲ್ಲಿ, ತಾಹಿರಾ ತನ್ನ ಖಾಸಗಿ ಜೀವನದ ಬಗ್ಗೆ ಕೆಲವು ರಸವತ್ತಾದ ವಿವರಗಳನ್ನು ಹಂಚಿಕೊಂಡಿದ್ದಾರೆ. ಶಿಲ್ಪಾ ಶೆಟ್ಟಿ ಅವರು ನಿಮ್ಮ ಪುಸ್ತಕದಲ್ಲಿ ಲೈಂಗಿಕತೆಯ ಬಗ್ಗೆ ಎಷ್ಟು ಮುಕ್ತವಾಗಿ ಮತ್ತು ಆರಾಮದಾಯಕವಾಗಿ ಬರೆಯುತ್ತೀರಾ ಎಂಬುದರ ಕುರಿತು ಲೇಖಕಿ ಮತ್ತು ನಿರ್ದೇಶಕಿ ತಾಹಿರಾಗೆ ಕೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ತಾಹಿರಾ, “ಸೆಕ್ಸ್, ಅದ್ಭುತ ಕ್ರಿಯೆ, ಮತ್ತು ಒಳ್ಳೆಯದು ಕೂಡಾ. ಆದ್ದರಿಂದ ಏಕೆ ಬರೆಯಬಾರದು..! ಇದು ಅಸಹ್ಯಕರ ಅಲ್ಲ ಎಂದ ತಾಹಿರಾ, ಸೆಕ್ಸ್ ಕ್ಯಾಲೊರಿಗಳನ್ನು ಕರಗಿಸುವ ಅತ್ಯುತ್ತಮ ವ್ಯಾಯಾಮಗಳಲ್ಲಿ ಒಂದಾಗಿದೆ ಎಂಬ ಮಾತನ್ನು ವಿವರಿಸಿದ್ದಾರೆ. ಮತ್ತು ತಮ್ಮ ಪತಿ ಆಯುಷ್ಮಾನ್ ಖುರಾನಾ ಅವರ ಜೀವನಶೈಲಿಯ ಬದಲಾವಣೆಗಳು, ವರ್ಕೌಟ್‌ಗಳ ಬಗ್ಗೆಯೂ ತಿಳಿಸಿದರು.

ತಾಹಿರಾ ಪತಿ ಆಯುಷ್ಮಾನ್ ಅವರೊಂದಿಗೆ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಹೋಟೆಲ್‌ನಲ್ಲಿ ತಂಗಿದ್ದಾಗ, ಪತಿ ಪ್ರೋಟೀನ್‌ಗಾಗಿ ತನ್ನ ಎದೆ ಹಾಲನ್ನು ಕುಡಿದಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ. ಮಗನಿಗಾಗಿ ಎದೆಹಾಲನ್ನು ಬಾಟಲಿಯಲ್ಲಿ ಪಂಪ್ ಮಾಡಿಟ್ಟಿದ್ದೆ, ನಾನು ವಾಶ್‌ರೂಮ್‌ಗೆ ಹೋಗಿ ಬರುವಷ್ಟರಲ್ಲಿ ಆಯುಷ್ಮಾನ್ ಹಾಲನ್ನು ಕುಡಿದಿದ್ದರು ಎಂದು ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದರು.

You may also like

Leave a Comment