ಲಕ್ನೋ: ಮದುವೆ ಸಮಾರಂಭದಲ್ಲೇ ಪ್ರೇಮಿಯೊಬ್ಬ ವಧುವನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಉತ್ತರ ಪ್ರದೇಶದ ಮಥುರಾದ ಮುಬಾರಿಕ್‍ಪುರ ಗ್ರಾಮದಲ್ಲಿ ನಡೆದಿದೆ.

ಕಾಜಲ್ ಮೃತ ಮಹಿಳೆ. ಹಾಗೂ ಗುಂಡಿಕ್ಕಿ ಕೊಂದ ಅನಿಶ್ ಆರೋಪಿ.
ವರನ ಕೊರಳಿಗೆ ಹಾರ ಹಾಕುವ ಸಂಪ್ರದಾಯ ಮುಗಿದ ತಕ್ಷಣವೇ ವಧುವಿನ ಪ್ರಿಯಕರ ಆಕೆಯ ಮೇಲೆ ಗುಂಡಿನ ದಾಳಿ ನಡೆಸಿದ್ದು, ಕಾಜಲ್ ಸ್ಥಳದಲ್ಲಿಯೇ ಕೊನೆಯುಸಿರೆಳೆದಿರುವುದಾಗಿ ವರದಿ ತಿಳಿಸಿದ್ದು,ಈ ಘಟನೆ ಶುಕ್ರವಾರ ನಡೆದಿದೆ.
ಆರೋಪಿ ಹಾಗೂ ಯುವತಿಯ ನಡುವೆ ಪ್ರೇಮ ಸಂಬಂಧ ಹೊಂದಿದ್ದು, ಆಕೆ ಇನ್ನೊಬ್ಬನ ಜತೆ ವಿವಾಹವಾಗುತ್ತಿರುವುದಕ್ಕೆ ಆತ ಆಕ್ರೋಶಗೊಂಡಿದ್ದ ಎಂದು ಹೇಳಲಾಗಿದೆ.’ವಧು-ವರ ಮಾಲೆಯನ್ನು ಅದಲು ಬದಲು ಮಾಡಿಕೊಳ್ಳುವ ಸಂಪ್ರದಾಯ ಮುಗಿದ ನಂತರ ಮಗಳು ಫ್ರೆಶ್ ಅಪ್ ಆಗಲು ಕೋಣೆಯೊಳಗೆ ತೆರಳಿದ್ದ ವೇಳೆ ಅಪರಿಚಿತ ಯುವಕನೊಬ್ಬ ಬಂದು ಮಗಳ ಮೇಲೆ ಗುಂಡು ಹಾರಿಸಿದ್ದ. ಇದನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ’ಎಂದು ಮೃತ ವಧುವಿನ ತಂದೆ ಖುಬಿ ರಾಮ್ ಪ್ರಜಾಪತಿ ಮಾತನಾಡುತ್ತ ತಿಳಿಸಿದ್ದಾರೆ.
ಘಟನೆಯ ನಂತರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಶ್ ಚಂದ್ರ ಎಎನ್ ಐಗೆ ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.
