Home » ಚಂದನವನಕ್ಕೆ ಮೋಹಕತಾರೆ ರಮ್ಯಾ ಕಮ್ ಬ್ಯಾಕ್!!!

ಚಂದನವನಕ್ಕೆ ಮೋಹಕತಾರೆ ರಮ್ಯಾ ಕಮ್ ಬ್ಯಾಕ್!!!

by Mallika
1 comment

ರಮ್ಯಾ ಮತ್ತೆ ಸಿನಿಮಾದಲ್ಲಿ ನಟಿಸದೇ ತುಂಬಾನೇ ವರ್ಷಗಳಾಯ್ತು. ಈ ನಟಿಯನ್ನು ಸಿನಿಮಾ ಪರದೆ ಮೇಲೆ ಮತ್ತೆ ನೋಡಬೇಕು ಎಂಬ ಹಂಬಲ ಅವರ ಅಭಿಮಾನಿಗಳಲ್ಲಿದೆ. ಹಲವು ದಿನಗಳಿಂದ ರಮ್ಯಾ ಕಮ್ ಬ್ಯಾಕ್ ಮಾಡಬೇಕು ಅಂತ ಸಿನಿಪ್ರಿಯರು ಒತ್ತಡ ಹಾಕುತ್ತಿದ್ದರು. ಅವರ ಒತ್ತಾಯದಂತೆ ಮೋಹಕ ತಾರೆ ಸ್ಯಾಂಡಲ್‌ವುಡ್ ಸಿನಿಮಾವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಶೀಘ್ರದಲ್ಲೇ ಆ ಸುದ್ದಿ ಹೊರಬೀಳಲಿದೆ.

ಕನ್ನಡ ಸಿನಿಮಾ ತಂಡವೊಂದು ರಮ್ಯಾ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದೆ. ಶೀಘ್ರದಲ್ಲಿ ಮೋಹಕತಾರೆಯನ್ನು ತೆರೆಮೇಲೆ ನೋಡಬಹುದು ಎನ್ನುತ್ತಿದೆ ಸ್ಯಾಂಡಲ್‌ವುಡ್. ಅಷ್ಟಕ್ಕೂ ರಮ್ಯಾ ಕಮ್ ಬ್ಯಾಕ್ ಮಾಡಿರುವ ಆ ಸಿನಿಮಾ ಯಾವುದು, ಅದರಲ್ಲಿ ಅವರ ಪಾತ್ರ ಏನು ಅನ್ನೋದು ಇನ್ನೂ ಗುಟ್ಟಾಗಿದೆ. ಆದರೆ ಸಿನಿಮಾವೊಂದರಲ್ಲಿ ಅವರು ಅತಿಥಿ ಪಾತ್ರದಲ್ಲಿ ಈಗಾಗಲೇ ನಟಿಸಿದ್ದಾರೆ ಎನ್ನುವ ಮಾತು ಸ್ಯಾಂಡಲ್‌ವುಡ್‌ನಲ್ಲಿ ಕೇಳಿ ಬರುತ್ತಿದೆ. ಕಮ್ ಬ್ಯಾಕ್ ಸಿನಿಮಾದಲ್ಲಿ ರಮ್ಯಾ ಇದೂವರೆಗೂ ಮಾಡದ ಪಾತ್ರವೊಂದರಲ್ಲಿ ನಟಿಸಿದ್ದು, ಪಾತ್ರ ಚಿಕ್ಕದಿದ್ದರೂ, ಸಿನಿಮಾದ ಹೈಲೈಟ್ ಈ ಪಾತ್ರವೇ ಆಗಿರುತ್ತಂತೆ.

‘ರಮ್ಯಾ ಕನ್ನಡದ ಸಿನಿಮಾವೊಂದಕ್ಕೆ ಬಣ್ಣ ಹಚ್ಚಿರುವುದು ಸುಳ್ಳಲ್ಲ. ಆದರೆ, ಯಾವ ಸಿನಿಮಾ ಅನ್ನುವುದು ಶೀಘ್ರದಲ್ಲೇ ತಿಳಿಯುತ್ತೆ’ ಅಂತಿದ್ದಾರೆ ಸ್ಯಾಂಡಲ್‌ವುಡ್ ನ ನಿರ್ಮಾಪಕರೊಬ್ಬರು. ರಮ್ಯಾ ಅವರೂ ಈ ಗುಟ್ಟು ಬಿಟ್ಟುಕೊಟ್ಟಿಲ್ಲ. ಚಿತ್ರತಂಡ ಕೂಡ ಸುಳಿವು ಬಿಟ್ಟು ಕೊಡುತ್ತಿಲ್ಲ. ಸಿನಿಮಾ ಪ್ರಚಾರದ ವೇಳೆ ಈ ವಿಷಯವನ್ನು ರಿವೀಲ್ ಮಾಡಲು ಚಿತ್ರತಂಡ ನಿರ್ಧರಿಸಿದೆ.

You may also like

Leave a Comment