Home » ಉಡುಪಿ : ಪಿಯುಸಿ ಫಲಿತಾಂಶಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ!

ಉಡುಪಿ : ಪಿಯುಸಿ ಫಲಿತಾಂಶಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ!

0 comments

ಬೈಂದೂರು : ಪ್ರಥಮ ಪಿಯುಸಿ ಫಲಿತಾಂಶದಿಂದ ಹೆದರಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ
ಬೈಂದೂರಿನ ತಗ್ಗರ್ಸೆ ಎಂಬಲ್ಲಿ ಶನಿವಾರ ನಡೆದಿದೆ.

ಶೋಭಾ ಶೇರುಗಾರರ ಬಾಡಿಗೆ ಮನೆ ನಿವಾಸಿ ಬೇಬಿ ಶೆಡ್ತಿ ಎಂಬವರ ಮಗ ಸುದೀಪ್(17) ಎಂಬುವವನೇ ಮೃತ ವಿದ್ಯಾರ್ಥಿ.

ಸುದೀಪ್ ಬೈಂದೂರು ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಕಲಿಯುತ್ತಿದ್ದು, ಎ.30ರ ಪ್ರಥಮ ಪಿಯುಸಿಯ ಫಲಿತಾಂಶದಲ್ಲಿ ತಾನು ಪಾಸ್ ಆಗುವುದಿಲ್ಲ ಎಂಬ ಹೆದರಿಕೆಯಿಂದ ಮನೆಯ ಅಡುಗೆ ಕೋಣೆಯ ಮಾಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment