Home » ಬಾಲಿವುಡ್ ನ ಈ ಸ್ಟಾರ್ ನಟನಿಗೆ ಲಿಫ್ಟ್ ನಲ್ಲಿ ಹೋಗುವುದೆಂದರೆ ಭಯವಂತೆ !! | ಭಯದ ಹಿಂದಿರುವ ಕಾರಣ !?

ಬಾಲಿವುಡ್ ನ ಈ ಸ್ಟಾರ್ ನಟನಿಗೆ ಲಿಫ್ಟ್ ನಲ್ಲಿ ಹೋಗುವುದೆಂದರೆ ಭಯವಂತೆ !! | ಭಯದ ಹಿಂದಿರುವ ಕಾರಣ !?

0 comments

ಇತ್ತೀಚೆಗಷ್ಟೇ ಹಿಂದಿ ಭಾಷೆ ವಿಚಾರವಾಗಿ ನಟ ಕಿಚ್ಚ ಸುದೀಪ್ ಜೊತೆ ಬಹುದೊಡ್ಡ ಚರ್ಚೆ ನಡೆಸಿ ವಿವಾದಕ್ಕೀಡಾದ ನಟ ಅಜಯ್ ದೇವಗನ್ ಇದೀಗ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದು, ಲಿಫ್ಟ್‌ನಲ್ಲಿ ಹೋಗುವುದೆಂದರೆ ನನಗೆ ಭಯ ಎಂದು ಬಾಲಿವುಡ್ ಸ್ಟಾರ್ ನಟ ಹೇಳಿದ್ದಾರೆ.

ಅಜಯ್ ದೇವಗನ್ ನಟನೆಯ ‘ರನ್ ವೇ 34′ ಚಿತ್ರ ಬಿಡುಗಡೆಗೊಂಡಿದೆ. ಸದ್ಯ ನಟಿ ರಾಕುಲ್ ಪ್ರೀತ್ ಸಿಂಗ್ ಜೊತೆಗೆ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಲಿಟ್ಲ್ ಮಾಸ್ಟರ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ನಟ ತಮಗಿರುವ ಭಯವೊಂದರ ಕುರಿತು ಮಾತನಾಡಿದ್ದಾರೆ.

ಭಯ ಬೀಳಲು ಕಾರಣ ??

ಕೆಲವು ವರ್ಷಗಳ ಹಿಂದೆ ಲಿಫ್ಟ್ ನಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಏಕಾಏಕಿ ಲಿಫ್ಟ್ ಕೈಕೊಟ್ಟಿತ್ತು. ಅಲ್ಲದೆ ಮೂರನೇ ಮಹಡಿಯಿಂದ ಅತೀ ವೇಗದಿಂದ ನೆಲ ಮಹಡಿಗೆ ಲಿಫ್ಟ್ ಧೊಪ್ಪೆಂದು ಬಿತ್ತು. ಪರಿಣಾಮ ನನ್ನ ಜೊತೆ ಇದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿತ್ತು. ಇದರಿಂದ ಸುಮಾರು ಒಂದೂವರೆ ಗಂಟೆಯಷ್ಟು ಕಾಲ ನಾವು ಲಿಫ್ಟ್ ಒಳಗಡೆಯೇ ಸಿಲುಕುವಂತಾಗಿತ್ತು.

ಈ ಘಟನೆಯ ಬಳಿಕ ನನಗೆ ಲಿಫ್ಟ್ ಕಂಡರೆ ಭಯವಾಗುತ್ತದೆ. ಲಿಫ್ಟ್ ನಲ್ಲಿ ಹೋಗುವಾಗ ಏನಾದರೂ ಅವಘಡ ಸಂಭವಿಸುತ್ತದೆಯೋ ಅನ್ನೋ ಭಯ ಕಾಡುತ್ತದೆ ಎಂದು ನಟ ನಡೆದ ಘಟನೆಯನ್ನು ವಿವರಿಸಿದ್ದಾರೆ.

You may also like

Leave a Comment