Home » ವಾಸ್ತು ಪ್ರಕಾರ ಮನೆಯಲ್ಲಿ ಈ ವಸ್ತುಗಳು ಇರಲೇಬಾರದಂತೆ !! | ಮನೆಯಲ್ಲಿ ನಕಾರಾತ್ಮಕತೆ ಸೃಷ್ಟಿಸುವ ಇವುಗಳನ್ನು ಆದಷ್ಟು ಬೇಗ ಮನೆಯಿಂದ ಹೊರಹಾಕಿ

ವಾಸ್ತು ಪ್ರಕಾರ ಮನೆಯಲ್ಲಿ ಈ ವಸ್ತುಗಳು ಇರಲೇಬಾರದಂತೆ !! | ಮನೆಯಲ್ಲಿ ನಕಾರಾತ್ಮಕತೆ ಸೃಷ್ಟಿಸುವ ಇವುಗಳನ್ನು ಆದಷ್ಟು ಬೇಗ ಮನೆಯಿಂದ ಹೊರಹಾಕಿ

0 comments

ಒಂದು ಸುಂದರವಾದ ಮನೆ ಇದ್ದರೆ ಸಾಕಾಗುವುದಿಲ್ಲ.ಅಲ್ಲಿ ನೆಮ್ಮದಿ ಮುಖ್ಯ.ಪ್ರತಿಯೊಂದು ಮನೆಗೂ ಶಾಸ್ತ್ರ ಸಂಪ್ರದಾಯ ಸೇರಿದಂತೆ ವಾಸ್ತು ಪ್ರಕಾರ ಇದ್ದರಷ್ಟೇ ಅಲ್ಲಿ ಯಶಸ್ಸು ಕಾಣಲು ಸಾಧ್ಯ.ಅದೆಷ್ಟು ಜನ ಎಷ್ಟು ಕಷ್ಟಪಟ್ಟು ದುಡಿದರೂ, ಹಣ ಉಳಿಯುತ್ತಿಲ್ಲ ಎಂಬ ಗೊಂದಲದಲ್ಲಿ ಇರಬಹುದು. ಇದಕ್ಕೆ ಕಾರಣವೇ ಮನೆಯಲ್ಲಿರುವ ಕೆಲವು ನಕರಾತ್ಮಕತೆ ಬೀರುವ ವಸ್ತುಗಳು.ಹೀಗಾಗಿ ವಾಸ್ತು ಪ್ರಕಾರ ಇಂತಹ ವಸ್ತುಗಳನ್ನು ಮನೆಯಲ್ಲಿ ಇರಿಸಿದರೆ ನಿಮ್ಮ ಹಣದ ವ್ಯವಹಾರಕ್ಕೆ, ನಿಮ್ಮ ಆರೋಗ್ಯಕ್ಕೆ ಬೀಳಬಹುದಂತೆ ಅಡ್ಡಿ.

ಹೀಗಾಗಿ ಮನೆಯಲ್ಲಿರುವ ಎಲ್ಲ ವಸ್ತುಗಳ ಬಗ್ಗೆ ಗಮನ ನೀಡುವುದು ಬಹಳ ಮುಖ್ಯ.ಮನೆಯಲ್ಲಿರುವ ಕೆಲವೊಂದು ವಸ್ತುಗಳು ಮನೆಯ ಸಂತೋಷವನ್ನು ಕಸಿದುಕೊಳ್ಳುತ್ತೆ.ವಾಸ್ತುಶಾಸ್ತ್ರ ಹೇಳುವ ಕೆಲ ವಸ್ತುಗಳು ಮನೆಯಲ್ಲಿ ಕಂಡು ಬಂದ್ರೆ ತಕ್ಷಣ ಮನೆಯ ಹೊರಗೆ ಹಾಕಿ. ಅಂತಹ ಅಶುಭ ಸಂಕೇತ ಯಾವುದೆಲ್ಲ ಎಂಬುದನ್ನು ಇಲ್ಲಿ ನೋಡಿ.

*ಮನೆಯೊಳಗೆ ಪಾರಿವಾಳ ಗೂಡು ಕಟ್ಟುವುದು ಅಶುಭದ ಸಂಕೇತ. ಇದರಿಂದ ದೊಡ್ಡ ತೊಂದರೆ ಬರುತ್ತೆ ಎಂಬ ನಂಬಿಕೆ ಇದೆ. ಹಾಗಾಗಿ ಪಾರಿವಾಳದ ಗೂಡ ಕಂಡಲ್ಲಿ ತಕ್ಷಣ ತೆಗೆದು ಹಾಕಿ.
*ಮನೆಯೊಳಗೆ ಜೇನು ಗೂಡುಕಟ್ಟಲು ಪ್ರಾರಂಭಿಸಿದರೆ ಅದು ಅಮಂಗಲ. ಕುಟುಂಬಸ್ಥರಿಗೆ ಅಪಘಾತವಾಗುವ ಸಂಭವವಿರುತ್ತದೆ.
*ಜೇಡದ ಬಲೆಯನ್ನು ಆಗಾಗ ತೆಗೆದು ಹಾಕ್ತಾ ಇರಿ. ಇದರಿಂದ ತೊಡಕು ಹಾಗೂ ತೊಂದರೆಗಳು ಎದುರಾಗುತ್ತವೆ.
*ಒಡೆದ ಗ್ಲಾಸುಗಳನ್ನು ಮನೆಯಲ್ಲಿಡಬೇಡಿ. ನಕಾರಾತ್ಮಕ ಶಕ್ತಿಗಳ ಬಲ ಹೆಚ್ಚಾಗುತ್ತದೆ.
*ಮನೆಯೊಳಗೆ ಬಾವಲಿಗಳು ಬಂದ್ರೆ ತಕ್ಷಣ ಹೊರಗೆ ದಬ್ಬಿ.
*ಮನೆಯ ಛಾವಣಿ ಮೇಲೆ ಬಟ್ಟೆ ಅಥವಾ ಅನುಪಯುಕ್ತ ವಸ್ತುಗಳನ್ನು ಇಡಬೇಡಿ.
*ದೇವರ ಮನೆಯಲ್ಲಿ ಹಳೆ ಹೂವುಗಳನ್ನಿಡಬೇಡಿ.

You may also like

Leave a Comment