Home » ಒಂದೇ ಮಂಟಪದಲ್ಲಿ ತನ್ನ 6 ಮಕ್ಕಳ ಮುಂದೆ ಮೂವರನ್ನು ವರಿಸಿದ ಮದುಮಗ|

ಒಂದೇ ಮಂಟಪದಲ್ಲಿ ತನ್ನ 6 ಮಕ್ಕಳ ಮುಂದೆ ಮೂವರನ್ನು ವರಿಸಿದ ಮದುಮಗ|

by Mallika
0 comments

ಮದುವೆ ಎಲ್ಲರ ಜೀವನದಲ್ಲಿ ಒಂದೇ ಬಾರಿ ಆಗುವುದು. ಆದರೆ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಎರಡು ಮದುವೆ ಆಗುವವರ ಬಗ್ಗೆ ನಾವು ನೋಡಿರಬಹುದು.
ಕೆಲ ಮದುವೆಗಳು ವಿಚಿತ್ರವೆನಿಸಿದರೂ ಭಾರೀ ಸುದ್ದಿಯಲ್ಲಿರುತ್ತವೆ. ಇಲ್ಲೊಂದು ಮದುವೆ ಭಾರೀ ಸುದ್ದಿ ಮಾಡಿದೆ. ಅದೇನೆಂದರೆ, ಒಬ್ಬ ಪುರುಷ ಮೂವರು ಮಹಿಳೆಯರನ್ನು ಅದೂ ತಮ್ಮ ಮಕ್ಕಳ ಮುಂದೆಯೇ ಮದುವೆಯಾಗಿರುವ ವೀಡಿಯೋ ಇದೀಗ ಭಾರೀ ವೈರಲ್ ಆಗಿದೆ.

ಹೌದು.. ಇದು ನಿಜವಾಗಿಯೂ ನಡೆದ ಘಟನೆಯಾಗಿದ್ದು, ಮಧ್ಯಪ್ರದೇಶದ ಬಹುಲ್ ಅಲಿರಾಜ್‌ಪುರ ಜಿಲ್ಲೆಯಲ್ಲಿ. ವಿಚಿತ್ರವೇನೆಂದರೆ ಈ ವ್ಯಕ್ತಿ ಮೂವರು ಮಹಿಳೆಯನ್ನು ಒಂದೇ ಮಂಟಪದಲ್ಲಿ ವರಿಸಿದ್ದಾನೆ. ಅದೂ ತನ್ನ 6 ಮಕ್ಕಳ ಮುಂದೆ. ಏನೀ ವಿಚಿತ್ರ ಅಂತೀರಾ? ಇದು ಲಿವ್ ಇನ್ ರಿಲೇಷನ್ ಶಿಪ್ ಸಂಬಂಧ ಇಟ್ಟುಕೊಂಡ ವ್ಯಕ್ತಿಯ ಮದುವೆಯ ಕಥೆ.

ಈ ವ್ಯಕ್ತಿ 10 ವರ್ಷಗಳಿಂದ ಈ ಮೂವರು ಮಹಿಳೆಯರೊಂದಿಗೆ ಲಿವ್ ಇನ್ ರಿಲೇಷನ್ ನಲ್ಲಿದ್ದು ಅವರಿಂದ ಈತನಿಗೆ 6 ಮಕ್ಕಳು ಹುಟ್ಟಿದೆ. ಇಷ್ಟಾದರೂ ಆತ ಮದುವೆಯಾಗಿರಲಿಲ್ಲ. ಆದರೆ ಮದುವೆಯಾಗದೇ ಕುಟುಂಬ ಹೊಂದಿದ್ದ ಈತನಿಗೆ ಈಗ ಈತನ ಸಮುದಾಯವರೆಲ್ಲಾ ಸೇರಿ ಮದುವೆ ಮಾಡಿಸಿದ್ದಾರೆ. 15 ವರ್ಷಗಳ ಹಿಂದೆ ಈತ ಆ ಹೆಣ್ಣು ಮಕ್ಕಳ ಜೊತೆ ಸಂಬಂಧ ಇಟ್ಟುಕೊಂಡಾಗ ಆತ ಬಡವನಾಗಿದ್ದನಂತೆ. ದುಡ್ಡು ಇರಲಿಲ್ಲ ಎಂಬ ಕಾರಣಕ್ಕೆ ಮದುವೆ ಆಗಿಲ್ವಂತೆ. ಆದರೆ ಈಗ ಆತ ಊರಿನ ಸರಪಂಚ್ ಆಗಿದ್ದು, ಸಾಕಷ್ಟು ದುಡ್ಡು ಮಾಡಿರುವುದರಿಂದ ಈಗ ಮದುವೆಯಾಗುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ.
ಈ ಮಧುಮಗನ ಹೆಸರೇ ಸಮರ್ಥ್ ಮೌರ್ಯ. ಈ ಮದುಮಗ ಮದುವೆ ಮಂಟಪದಲ್ಲಿ ಖುಷಿಯಿಂದ ಕುಣಿಯುತ್ತಿರುವ ವಿಡಿಯೋ ಈಗ ಭಾರೀ ವೈರಲ್ ಆಗುತ್ತಿದೆ.

ಮೂರು ಮೂರು ಮದುವೆ ಅದು ಕೂಡಾ ಒಂದೇ ಮಂಟಪದಲ್ಲಿ…ಲಡ್ಡು ಬಂದು ಬಾಯಿಗೆ ಬಿತ್ತು ಅಂತಾ ಇದನ್ನೇನಾ ಹೇಳುವುದು!!!

You may also like

Leave a Comment