Home » ತಾಯಿಯ ಅಕ್ರಮ ಸಂಬಂಧ | ತಾಯಿ ಜೊತೆ ಮಲಗಿದ್ದವನ ಮರ್ಮಾಂಗಕ್ಕೆ ಬ್ಲೇಡ್ ಗೀಚಿ ಹರಿದ ಮಗಳು !!

ತಾಯಿಯ ಅಕ್ರಮ ಸಂಬಂಧ | ತಾಯಿ ಜೊತೆ ಮಲಗಿದ್ದವನ ಮರ್ಮಾಂಗಕ್ಕೆ ಬ್ಲೇಡ್ ಗೀಚಿ ಹರಿದ ಮಗಳು !!

0 comments

ತನ್ನ ತಾಯಿ ವ್ಯಕ್ತಿಯೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿರುವುದನ್ನು ಕಂಡು ಸಹಿಸಿಕೊಳ್ಳಲಾಗದ ಮಗಳೊಬ್ಬಳು ತಾಯಿಯ ಜೊತೆ ಹಾಯಾಗಿ ಮಲಗಿದ್ದ ಪ್ರೇಮಿಯ ಮರ್ಮಾಂಗವನ್ನು ಬ್ಲೇಡ್ ಗೀಚಿ ಕಟ್ ಮಾಡಿರುವ ಘಟನೆ ಆಂಧ್ರಪ್ರದೇಶದ ಬಪಟ್ಠಾ ಜಿಲ್ಲೆಯ ತುಮ್ಮಲಪಾಲಂನಲ್ಲಿ ನಡೆದಿದೆ.

ರಾಮಚಂದ್ರ ರೆಡ್ಡಿ ಎಂಬಾತನೇ ತನ್ನ ಮರ್ಮಾಂಗವನ್ನು ಕಳೆದುಕೊಂಡು ಹಿಂಸೆ ಅನುಭವಿಸುತ್ತಿರುವ ವ್ಯಕ್ತಿ. ಆತ ಎರಡು ವರ್ಷಗಳ ಹಿಂದೆ ಗುಂಟೂರು ಜಿಲ್ಲೆ ತೆನಾಲಿಯ ರೈಲ್ವೆ ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ವೇಳೆ ಈ ಮಹಿಳೆಯ ಪರಿಚಯವಾಗಿತ್ತು. ಪರಿಚಯವು ಪ್ರೇಮಕ್ಕೆ ತಿರುಗಿ ಇಬ್ಬರ ನಡುವೆ ದೈಹಿಕ ಸಂಪರ್ಕ ಕೂಡ ಏರ್ಪಟ್ಟಿತ್ತು. ಇಬ್ಬರೂ ಜೊತೆಗೆ ಮದ್ಯ ಬೇರೆ ಸೇವಿಸುತ್ತಿದ್ದರು.

ಅದಾಗಲೇ ಮದುವೆಯಾಗಿ ಮಗಳನ್ನು ಹೊಂದಿದ್ದಳು ಈ ಮಹಿಳೆ. ಮಗಳಿಗೆ ತನ್ನ ತಾಯಿ ಈ ರೀತಿ ಅಕ್ರಮ ಸಂಬಂಧ ಹೊಂದಿರುವುದು ಇಷ್ಟವಿರಲಿಲ್ಲ. ಪದೇ ಪದೇ ಈ ವಿಷಯವಾಗಿ ತಾಯಿ-ಮಗಳ ಜೊತೆ ಜಗಳವಾಗುತ್ತಿತ್ತು. ಆದರೆ ಸಮಸ್ಯೆ ಮಾತ್ರ ಬಗೆಹರಿದಿರಲಿಲ್ಲ.

ಆದರೆ ನಿನ್ನೆ ರಾತ್ರಿ ಮಹಿಳೆ ಮತ್ತು ಪ್ರಿಯಕರ ಗಾಢ ನಿದ್ರೆಯಲ್ಲಿ ಇದ್ದಾಗ ಮಗಳು ಮೆಲ್ಲಗೆ ಹೋಗಿ ಬ್ಲೇಡ್ ನಿಂದ ಆತನ ಮರ್ಮಾಂಗವನ್ನು ಕತ್ತರಿಸಿದ್ದಾಳೆ. ನೋವಿನಿಂದ ಚೀರಿಕೊಂಡ ರೆಡ್ಡಿಯನ್ನು ಸಮೀಪದ ಸರ್ಕಾರಿ ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆ ಅಗತ್ಯ ಇದ್ದುದರಿಂದ ಬೇರೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.

ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

You may also like

Leave a Comment