ಕಾಲಿವುಡ್ನ ಖ್ಯಾತ ನಟ ಸೂರ್ಯ ಅಭಿನಯಿಸಿರುವ ‘ಜೈ ಭೀಮ್’ ಸಿನಿಮಾ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗಿ ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗಿ ಸಕತ್ ಹಿಟ್ ಆಗಿತ್ತು. ಆದರೆ ಈಗ ಸಿನಿಮಾದ ನಟ ಸೂರ್ಯ, ನಿರ್ಮಾಪಕಿಯೂ ಆಗಿರುವ ಪತ್ನಿ ಜ್ಯೋತಿಕಾ ಹಾಗೂ ನಿರ್ದೇಶಕ ಜ್ಞಾನವೇಲ್ ವಿರುದ್ಧ ಎಫ್ಐಆರ್ ದಾಖಲು ಮಾಡುವಂತೆ ಚೆನ್ನೈನ ನ್ಯಾಯಾಲಯವೊಂದು ಆದೇಶಿಸಿದೆ.
ಆದರೆ ಕೆಲವರು ‘ಜೈ ಭೀಮ್’ ಚಿತ್ರದ ಬಗ್ಗೆ ಆಕ್ಷೇಪ ಎತ್ತಿದ್ದರು. ವನ್ನಿಯಾರ್ ಸಮುದಾಯದ ಜನರನ್ನು ಈ ಸಿನಿಮಾದಲ್ಲಿ ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂದು ತಕರಾರು ತೆಗೆದಿದ್ದರು. ಈ ಪ್ರಕರಣ ಈಗ ಕೋರ್ಟ್ ಮೆಟ್ಟಿಲು ಏರಿದೆ. ರುದ್ರ ವನ್ನಿಯಾರ್ ಸೇನಾ’ ಸಂಘಟನೆಯವರು ಈ ಕೇಸ್ ದಾಖಲಿಸಿದ್ದಾರೆ.
ಪ್ರಕರಣದ ಕುರಿತು ಏ.29ರಂದು ಈ ವಿಚಾರಣೆ ನಡೆಯಿತು. ಆದರೆ ನಟ ಸೂರ್ಯ, ನಿರ್ಮಾಪಕಿ ಜ್ಯೋತಿಕಾ ಹಾಗೂ ನಿರ್ದೇಶಕ ಜ್ಞಾನವೇಲ್ ಅವರು ವಿಚಾರಣೆಯಲ್ಲಿ ಹಾಜರಾಗಿಲ್ಲ.
ವಿಚಾರಣೆ ನಡೆಸಿದ ನ್ಯಾಯಾಲಯವು ಈ ಆದೇಶ ಹೊರಡಿಸಿದೆ ಸೂರ್ಯ, ಜ್ಯೋತಿಕಾ ಮತ್ತು ಜ್ಞಾನವೇಲ್ ವಿರುದ್ಧ ಎಫ್ಐಆರ್ ದಾಖಲಿಸಿ, ಕಾನೂನು ಪ್ರಕಾರ ತನಿಖೆ ನಡೆಸುವಂತೆ ಚೆನ್ನೈ ಪೊಲೀಸರಿಗೆ ಕೋರ್ಟ್ ಸೂಚಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಮೇ 20ರಂದು ನಡೆಯಲಿದೆ.
