Home » ಕಡಬ : ಅತಿಕ್ರಮಣ ಪ್ರವೇಶ ಮಾಡಿ ಅನ್ಯಧರ್ಮದವರ ಪ್ರಾರ್ಥನಾ ಚಟುವಟಿಕೆ | ದೂರು ನೀಡಿದಕ್ಕೆ ಹಲ್ಲೆ ಯತ್ನ, ಕೊಲೆ ಬೆದರಿಕೆ,ದೂರು ದಾಖಲು

ಕಡಬ : ಅತಿಕ್ರಮಣ ಪ್ರವೇಶ ಮಾಡಿ ಅನ್ಯಧರ್ಮದವರ ಪ್ರಾರ್ಥನಾ ಚಟುವಟಿಕೆ | ದೂರು ನೀಡಿದಕ್ಕೆ ಹಲ್ಲೆ ಯತ್ನ, ಕೊಲೆ ಬೆದರಿಕೆ,ದೂರು ದಾಖಲು

by Praveen Chennavara
0 comments

ಕಡಬ: ನನ್ನ ಸ್ವಾಧೀನ ಇರುವ ಜಾಗಕ್ಕೆ ಅತಿಕ್ರಮಣ ಪ್ರವೇಶ ಮಾಡಿ ಅನ್ಯಧರ್ಮದ ಪ್ರಾರ್ಥನಾ ಚಟುವಟಿಕೆ ನಡೆಸುತ್ತಿದ್ದು ಈ ಬಗ್ಗೆ ಕಂದಾಯ ಇಲಾಖೆಗೆ ದೂರು ನೀಡಿದ್ದು ಇದನ್ನು ಪ್ರಶ್ನಿಸಿ ಜೋಸ್ ವರ್ಗಿಸ್, ಟಿ.ಜಿ ಚಾಕೋ, ವಿಕ್ಟರ್ ಮಾರ್ಟೀಸ್ ಹಾರಿಸ್ ಕಳಾರ ಎಂಬವರು ನನ್ನ ಜಾಗಕ್ಕೆ ಅತಿಕ್ರಮಣ ಪ್ರವೇಶ ಮಾಡಿ ಹಲ್ಲೆಗೆ ಯತ್ನಿಸಿ, ಕೊಲೆ ಬೆದರಿಕೆ ಒಡ್ಡಿದ್ದಾರೆ ಅಲ್ಲದೆ ಕೊಟ್ಟಿರುವ ದೂರನ್ನು ಹಿಂದಕ್ಕೆ ಪಡೆಯಬೇಕೆಂದು ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ನನ್ನ ಸ್ವಾಧಿನವಿದ್ದ ಜಾಗದಲ್ಲಿದ್ದ ಗೇರು ಮರವನ್ನು ಕಡಿದು ಹಾಕಿದ್ದಾರೆ ಎಂದು ಆರೋಪಿಸಿ ರೆಂಜಿಲಾಡಿ ಗ್ರಾಮದ ಎನ್ನಾಜೆ ನಿವಾಸಿ ಶೋಭರಾಜ್ ಎಂಬವರು ಕಡಬ ಪೋಲಿಸರಿಗೆ ದೂರು ನೀಡಿದ್ದು ಈ ಬಗ್ಗೆ ಕಡಬ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

You may also like

Leave a Comment