Home » ಡಿ.ಕೆ.ಶಿವಕುಮಾರ್ ಗೆ ಮಾಜಿ ಸಂಸದೆ ರಮ್ಯಾ ಟಾಂಗ್!, ಎಂ.ಬಿ.ಪಾಟೀಲ್-ಸಚಿವ ಅಶ್ವತ್ಥ ನಾರಾಯಣ ಭೇಟಿ ವಿಚಾರ

ಡಿ.ಕೆ.ಶಿವಕುಮಾರ್ ಗೆ ಮಾಜಿ ಸಂಸದೆ ರಮ್ಯಾ ಟಾಂಗ್!, ಎಂ.ಬಿ.ಪಾಟೀಲ್-ಸಚಿವ ಅಶ್ವತ್ಥ ನಾರಾಯಣ ಭೇಟಿ ವಿಚಾರ

by Praveen Chennavara
0 comments

ಮಾಜಿ ಸಚಿವ ಎಂ.ಬಿ. ಪಾಟೀಲ್ ಅವರನ್ನು ಸಚಿವ ಅಶ್ವತ್ಥನಾರಾಯಣ ಭೇಟಿ ವಿಚಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಮಾಜಿ ಸಂಸದೆ ರಮ್ಯಾ ನೇರವಾಗಿ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಸಂಸದೆ, ಎಂಬಿ ಪಾಟೀಲ್ ಹಾಗೂ ಅಶ್ವತ್ಥನಾರಾಯಣ್ ಭೇಟಿಯನ್ನು ಸಮರ್ಥಿಸಿಕೊಂಡಿದ್ದಾರೆ.

ರಾಜಕೀಯ ನಾಯಕರು ಪಕ್ಷಾತೀತವಾಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ಸಹಜ. ಕೆಲವರು ಬೇರೆ ಬೇರೆ ಪಕ್ಷದ ನಾಯಕರು ಮದುವೆ ಮೂಲಕ ಸಂಬಂಧಿಕರಾಗಿದ್ದಾರೆ. ಆದರೆ ಡಿ.ಕೆ. ಶಿವಕುಮಾರ್ ಅವರು ಎಂಬಿ ಪಾಟೀಲ್ ಅವರ ಬಗ್ಗೆ ನೀಡಿರುವ ಹೇಳಿಕೆ ನನಗೆ ಅಚ್ಚರಿ ಮೂಡಿಸಿದೆ. ಎಂಬಿ.ಪಾಟೀಲ್ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷ ಒಂದೇ ಘಟಕವಾಗಿ ಚುನಾವಣೆ ಎದುರಿಸಬೇಕಲ್ಲವೇ ಎಂದು ನೇರವಾಗಿ ಡಿಕೆಶಿ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ.

You may also like

Leave a Comment