Home » RCB ಅಭಿಮಾನಿಗಳಿಗೆ ಗುಡ್ ನ್ಯೂಸ್ !! | ಶೀಘ್ರದಲ್ಲೇ ತಂಡಕ್ಕೆ ಮರಳಲಿದ್ದಾರೆ ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್

RCB ಅಭಿಮಾನಿಗಳಿಗೆ ಗುಡ್ ನ್ಯೂಸ್ !! | ಶೀಘ್ರದಲ್ಲೇ ತಂಡಕ್ಕೆ ಮರಳಲಿದ್ದಾರೆ ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್

110 comments

ಐಪಿಎಲ್ ನಲ್ಲಿ ಆರ್ ಸಿಬಿ ತಂಡ ಎಂದರೆ ಏನೋ ಒಂದು ರೀತಿಯ ಕ್ರೇಜ್. ಅದರಲ್ಲೂ RCB ತಂಡ ಶುರುವಾದಾಗಿನಿಂದಲೂ ಬಲಿಷ್ಠ ಆಟಗಾರರಾದ ವಿರಾಟ್‌ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಅವರಿಬ್ಬರ ಸ್ನೇಹ ತುಂಬಾನೇ ಫೇಮಸ್ಸು. ಕೆಲ ವರ್ಷಗಳಲ್ಲಿ ಈ ಇಬ್ಬರ ಜೋಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮೆಚ್ಚುವಂತೆ ಮಾಡಿದೆ. ಆದರೆ, ಎಬಿಡಿ ನಿವೃತ್ತಿ ಘೋಷಿಸಿದ ನಂತರ ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ತೋರಿದ್ದಾರೆ.

ಸದ್ಯ ಪ್ಲೇ ಆಫ್‌ಗೆ ಇನ್ನೊಂದೆ ಹೆಜ್ಜೆ ತಲುಪಲು ಬಾಕಿ ಇರುವ ಹೊತ್ತಿನಲ್ಲೇ ವಿರಾಟ್ ಕೊಹ್ಲಿ ಆರ್‌ಸಿಬಿ ಅಭಿಮಾನಿಗಳಿಗೆ ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಎಬಿಡಿ ಮತ್ತೆ ಆರ್‌ಸಿಬಿಗೆ ಮರಳುತ್ತಿದ್ದಾರೆ ಎನ್ನುವ ವಿಷಯವನ್ನು ಸ್ವತಃ ಕೊಹ್ಲಿ ಅವರೇ ಬಹಿರಂಗಪಡಿಸಿದ್ದಾರೆ.

ಹೌದು. ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್ ಆರ್‌ಸಿಬಿ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಟ್ವೀಟ್ ಖಾತೆಯಲ್ಲಿ ವೀಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಈ ವೀಡಿಯೋ ನಲ್ಲಿ ವಿರಾಟ್ ಕೊಹ್ಲಿ, ಮತ್ತೆ ಎಬಿಡಿ ಆರ್‌ಸಿಬಿಗೆ ಮರಳುವುದನ್ನು ಮೌಖಿಕವಾಗಿ ಘೋಷಿಸಿದ್ದಾರೆ.

ಎಬಿಡಿ ಎಲ್ಲಾ ಸ್ವರೂಪಗಳಿಂದ ನಿವೃತ್ತರಾಗಿದ್ದಾರೆ. ಹಾಗಾಗಿ ಈ ಬಾರಿ ಐಪಿಎಲ್‌ನಲ್ಲಿ ಆಡುವ ಪ್ರಶ್ನೆಯೇ ಇರಲಿಲ್ಲ. ಆದರೆ, ಮುಂದಿನ ಸೀಸನ್‌ಗೆ ಮರಳಲಿದ್ದಾರೆ. ಆರ್‌ಸಿಬಿ ಎಬಿಡಿಯನ್ನು ಮತ್ತೆ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದೆ, ಆದರೆ ಯಾವ ರೀತಿಯಲ್ಲಿ ಎನ್ನುವುದು ತಿಳಿದು ಬಂದಿಲ್ಲ.

ಇತ್ತೀಚಿನ ಸಂದರ್ಶನವೊಂದರಲ್ಲಿ ವಿರಾಟ್ ಕೊಹ್ಲಿ ಅವರು, ನಾನು ತುಂಬಾ ನೆನಪಿಸಿಕೊಳ್ಳುತ್ತೇನೆ. ಎಬಿಡಿ ಜೊತೆ ಪ್ರತಿದಿನ ಮಾತನಾಡುತ್ತೇನೆ. ನನಗೆ ಸಂದೇಶಗಳನ್ನು ಕಳುಹಿಸುತ್ತಲೇ ಇರುತ್ತಾರೆ. ನಾವು ನಿರಂತರವಾಗಿ ಸಂಪರ್ಕದಲ್ಲಿರುತ್ತೇವೆ. ಅವರೂ ಆರ್‌ಸಿಬಿ ಪಂದ್ಯಗಳನ್ನೂ ಉತ್ಸುಕತೆಯಿಂದ ವೀಕ್ಷಿಸುತ್ತಿದ್ದಾರೆ. ಮುಂದಿನ ವರ್ಷದಲ್ಲಿ ಅವರು ಆರ್‌ಸಿಬಿ ತಂಡಕ್ಕೆ ಮರಳುವ ಆಶಾದಾಯಕ ಬೆಳವಣಿಗೆ ಇದೆ ಎಂದು ಹೇಳಿದ್ದಾರೆ.

https://twitter.com/RCBTweets/status/1524230315073449984?s=20&t=8GyDAMjwaCXXY562ulJt9A

You may also like

Leave a Comment