Home » ಜಡೇಜಾರನ್ನು ಸಿ ಎಸ್ ಕೆ ತಂಡ ಅನ್ ಫಾಲೊ ಮಾಡಿದ್ದು ಏಕೆ ?

ಜಡೇಜಾರನ್ನು ಸಿ ಎಸ್ ಕೆ ತಂಡ ಅನ್ ಫಾಲೊ ಮಾಡಿದ್ದು ಏಕೆ ?

0 comments

ಪಕ್ಕೆಲುಬಿಗೆ ಗಾಯವಾಗಿರುವ ಕಾರಣ ಹಾಲಿ ಐಪಿಎಲ್ ಋತುವಿನಿಂದ ಜಡೇಜಾ ಹೊರಬಿದಿದ್ದಾರೆ ಮತ್ತು ತಂಡ ಆಯ್ಕೆ ವಿಚಾರದಲ್ಲಿ ಆಡಳಿತ ಮಂಡಳಿ ಹಸ್ತಕ್ಷೇಪ ಮಾಡುತ್ತಿದೆ ಎಂಬ ಆರೋಪಗಳು ಈ ನಡುವೆ ಕೇಳಿ ಬರುತ್ತಿದೆ.

ಆಲ್ರೌಂಡರ್ ರವೀಂದ್ರ ಜಡೆಜಾರನ್ನು  ಸಿಎಸ್ಕೆ ತಂಡ ಸಾಮಾಜಿಕ ಜಾಲತಾಣದಲ್ಲಿ ಅನ್ಫಾಲೋ ಮಾಡಿದೆ. ಇದು ಚೆನೈ ಸೂಪರ್ ಕಿಂಗ್ಸ್ ಆಡಳಿತ ಮಂಡಳಿ ಹಾಗು ಕ್ರಿಕೆಟಿಗ ರವೀಂದ್ರಾ ಜಡೇಜಾ ನಡುವಿನ ಬಿನ್ನಾಭಿಪ್ರಾಯದ ಸುದ್ದಿಗೆ ತುಪ್ಪಸುರಿದಂತಾಗಿದೆ.

ನಾಯಕನ ಸ್ಥಾನಕ್ಕೆ ಧೋನಿ ರಾಜೀನಾಮೆ ನೀಡಿದ ಹಿನ್ನೆಲೆ ರವೀಂದ್ರ ಜಡೇಜಾರನ್ನು ಚೆನೈ ತಂಡದ ನಾಯಕರನ್ನಾಗಿ ಘೋಷಿಸಲಾಗಿತ್ತು. ಆದರೆ, ತಂಡದ ನಾಯಕತ್ವ ವಹಿಸಿಕೊಂಡ ನಂತರ ಸತತ ಸೋಲಿನ ಸರಪಳಿಯಲ್ಲಿ ಸಿಲುಕಿದ ಕಾರಣ ತಮ್ಮ ಸ್ಥಾನ್ಕಕೆ ರಾಜೀನಾಮೆ ನೀಡಿದ್ದರು.

You may also like

Leave a Comment