Home » ಮಂಗಳೂರು : ಚಾಲಕನ ಅಜಾಗರೂಕತೆಯ ಚಾಲನೆ | ಈರುಳ್ಳಿ ವಾಹನ ಪಲ್ಟಿ

ಮಂಗಳೂರು : ಚಾಲಕನ ಅಜಾಗರೂಕತೆಯ ಚಾಲನೆ | ಈರುಳ್ಳಿ ವಾಹನ ಪಲ್ಟಿ

0 comments

ಮಂಗಳೂರು : ಅಜಾಗರೂಕತೆಯ ಚಾಲನೆಯಿಂದ ಈರುಳ್ಳಿ ಸಾಗಿಸುತ್ತಿದ್ದ ಹೊಸ ಈಚರ್‌ ವಾಹನವು ಪಲ್ಟಿ ಹೊಡೆದ ಘಟನೆಯೊಂದು ರಾ.ಹೆ. 66 ರ ತೊಕ್ಕೊಟ್ಟು ಕಾಪಿಕಾಡಿನ ರಾಜ್ ಕೇಟರರ್ಸ್ ಬಳಿ ನಡೆದಿದೆ.

ಕಾಪಿಕಾಡು ಹೆದ್ದಾರಿಯಿಂದ ಈರುಳ್ಳಿ ಹೊತ್ತು ಕೇರಳಕ್ಕೆ ಅತೀ ವೇಗದಿಂದ ಸಾಗುತ್ತಿದ್ದ ಮಹಾರಾಷ್ಟ್ರ ನೋಂದಣಿಯ ಈಚರ್ ವಾಹನವು ರಸ್ತೆ ಬದಿಯ ಗ್ಯಾರೇಜ್ ಬಳಿ ಉರುಳಿ ಬಿದ್ದಿದೆ.

ಈಚರ್ ವಾಹನದೊಳಗಿದ್ದ ಮೂವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣ ಪುಟ್ಟ ಗಾಯಗೊಂಡು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈಚರ್ ವಾಹನ ಚಾಲಕನ ಅತೀ
ವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣವೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

You may also like

Leave a Comment