Home » ತಾಯಿಯ ಪ್ರಿಯಕರನಿಂದ ಮಗಳ ಮೇಲೆಯೇ ಅತ್ಯಾಚಾರ!! ಮನೆಯಲ್ಲಿ ಹೆರಿಗೆಯ ನಡೆದು ಆಸ್ಪತ್ರೆಯಲ್ಲಿ ಬಯಲಾಯಿತು ಸತ್ಯ

ತಾಯಿಯ ಪ್ರಿಯಕರನಿಂದ ಮಗಳ ಮೇಲೆಯೇ ಅತ್ಯಾಚಾರ!! ಮನೆಯಲ್ಲಿ ಹೆರಿಗೆಯ ನಡೆದು ಆಸ್ಪತ್ರೆಯಲ್ಲಿ ಬಯಲಾಯಿತು ಸತ್ಯ

0 comments

ಮಹಾತಾಯಿಯೊಬ್ಬಳು ತನ್ನ ಮಗಳ ಮೇಲೆಯೇ ಅತ್ಯಾಚಾರವೆಸಗಳು ತನ್ನ ಪ್ರಿಯಕರನಿಗೆ ಅವಕಾಶ ಮಾಡಿಕೊಟ್ಟ ಅಸಹ್ಯಕರ ಘಟನೆಯೊಂದು ತಮಿಳುನಾಡಿನ ಚೆನ್ನೈ ನಲ್ಲಿ ನಡೆದಿದ್ದು, ಸಂತ್ರಸ್ತ ಬಾಲಕಿ ಮನೆಯಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ಘಟನೆ ವಿವರ: ಚೆನ್ನೈ ನ ಒಟ್ಟೇರಿ ಎಂಬ ಪ್ರದೇಶದಲ್ಲಿ ನೆಲೆಸಿರುವ ಸುಮಿತ(40) ಎನ್ನುವ ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಪರಿಣಾಮ ಆತ ಮನೆಗೆ ಬರುತ್ತಿದ್ದು, ಮಹಿಳೆಯ ಅಪ್ರಾಪ್ತ ಮಗಳ ಮೇಲೂ ಕಣ್ಣು ಹಾಕಿದ್ದ. ಇದಕ್ಕೆ ಮಹಿಳೆ ಸಹಕರಿಸಿದ್ದು, ಮಗಳ ಮೇಲೂ ಅತ್ಯಾಚಾರ ಎಸಗಲು ಅವಕಾಶ ಮಾಡಿಕೊಟ್ಟಿದ್ದಳು.

ಕಳೆದ ಒಂದು ವರ್ಷದಿಂದ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ನಡೆದಿದ್ದ ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದು,ಆಸ್ಪತ್ರೆಗೆ ತೆರಳಿದರೆ ಗೊತ್ತಾಗಿಬಿಡುತ್ತದೆ ಎಂದು ಬಾಲಕಿಗೆ ಮನೆಯಲ್ಲೇ ಆರೈಕೆ ಮಾಡಿ ಹೆರಿಗೆ ನಡೆದಿದ್ದು,ಗಂಡು ಮಗುವಿಗೆ ಜನ್ಮ ನೀಡಿದ್ದಳು.ಬಳಿಕ ಮಗುವಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ತೆರಳಿದಾಗ ಆಧಾರ್ ಕಾರ್ಡ್ ಪರಿಶೀಲಿಸಿದ ಸಿಬ್ಬಂದಿಗೆ ಮಗುವಿನ ತಾಯಿಗೆ ಪ್ರಾಯ ತುಂಬಿರದ ಸಂಗತಿ ತಿಳಿದಿತ್ತು.

ಕೂಡಲೇ ಆಸ್ಪತ್ರೆ ಸಿಬ್ಬಂದಿ ವಿಷಯವನ್ನು ಪೊಲೀಸರಿಗೆ ಮುಟ್ಟಿಸಿದ್ದು, ಮಕ್ಕಳ ಕಲ್ಯಾಣ ಮಂಡಳಿಯ ಗಮನಕ್ಕೂ ಬಂದಿತ್ತು. ವಿಚಾರ ಬಯಲಾಗುತ್ತಲೇ ಆರೋಪಿ ಮುತ್ತುಕುಮಾರ್ ಹಾಗೂ ಬಾಲಕಿಯ ತಾಯಿ ತಲೆಮರೆಸಿಕೊಂಡಿದ್ದು, ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

You may also like

Leave a Comment