Home » ಗಂಡು ಮಗುವಿಗೆ ಜನ್ಮ ನೀಡಿದ ಸಂಜನಾ; ಗಲ್ರಾನಿ ಕುಟುಂಬದಲ್ಲಿ ಎರಡು ಖುಷಿ ಸುದ್ದಿ !

ಗಂಡು ಮಗುವಿಗೆ ಜನ್ಮ ನೀಡಿದ ಸಂಜನಾ; ಗಲ್ರಾನಿ ಕುಟುಂಬದಲ್ಲಿ ಎರಡು ಖುಷಿ ಸುದ್ದಿ !

by Mallika
0 comments

ಇಂದು (ಮೇ 19) ಸಂಜನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ವಿಶೇಷ ಎಂದರೆ ಸಂಜನಾ ಸಹೋದರಿ ನಿಕ್ಕಿ ಮದುವೆ ಇಂದೇ ನೆರವೇರಿದೆ.

ನಟಿ ಸಂಜನಾ ಗಲ್ರಾನಿ ಅವರು ಇತ್ತೀಚೆಗೆ ಪ್ರೆಗ್ನೆಂಟ್ ಆಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದರು. ಅಲ್ಲದೆ, ಸಾಕಷ್ಟು ಫೋಟೋಗಳನ್ನು ಅವರು ಹಂಚಿಕೊಂಡಿದ್ದರು. ಈಗ ಅವರ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಿದೆ. ಇಂದು ಸಂಜನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ವಿಶೇಷ ಎಂದರೆ ಸಂಜನಾ ಸಹೋದರಿ ನಿಕ್ಕಿ ಮದುವೆ ಕೂಡಾ ಇಂದೇ ಆಗಿದೆ.

ಮೇ ತಿಂಗಳಲ್ಲಿ ಮಗುವಿನ ಆಗಮನ ಆಗಲಿದೆ ಎಂದು
ಸಂಜನಾ ಈ ಮೊದಲೇ ಹೇಳಿದ್ದರು. ಅವರು 7ನೇ ತಿಂಗಳಿಗೆ ಕಾಲಿಟ್ಟಾಗ ಸೋಶಿಯಲ್ ಮೀಡಿಯಾದಲ್ಲಿ ಮಗು ಯಾವಾಗ ಜನಿಸಬಹುದು ಎಂದು ಅಭಿಮಾನಿಯೊಬ್ಬರು ಕಮೆಂಟ್ ಮೂಲಕ ಪ್ರಶ್ನಿಸಿದ್ದರು. ಪ್ರಾಯಶಃ ಮೇ ತಿಂಗಳ ‘ಅಂತ್ಯದಲ್ಲಿ’ ಎಂದು ಸಂಜನಾ ಉತ್ತರ ನೀಡಿದ್ದರು.

ಅಂತೆಯೇ ಮೇ ತಿಂಗಳ ಮುಗಿಯುವುದರೊಳಗೆ ಖುಷಿ
ಸುದ್ದಿ ಸಿಕ್ಕಿದೆ.

You may also like

Leave a Comment