Home » ಬಂಟ್ವಾಳ : ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರವಾಹನಕ್ಕೆ ಪೆಟ್ರೋಲ್ ಹಾಕಿ ಸುಟ್ಟ ಕಿಡಿಗೇಡಿಗಳು

ಬಂಟ್ವಾಳ : ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರವಾಹನಕ್ಕೆ ಪೆಟ್ರೋಲ್ ಹಾಕಿ ಸುಟ್ಟ ಕಿಡಿಗೇಡಿಗಳು

0 comments

ಬಂಟ್ವಾಳ: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ
ವಾಹನಕ್ಕೆ ಯಾರೋ ಕಿಡಿಗೇಡಿಗಳು ಪೆಟ್ರೋಲ್
ಹಾಕಿ ಸುಟ್ಟ ಘಟನೆ ನಿನ್ನೆ ಸಜೀಪಮುನ್ನೂರಿನಲ್ಲಿ ನಡೆದಿದೆ.

ದ್ವಿಚಕ್ರ ವಾಹನ ಮಿತ್ತಕಟ್ಟ ನಿವಾಸಿ ಗೌತಮ್ ಅವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ.

ಗೌತಮ್ ಅವರು ಬುಧವಾರ ರಾತ್ರಿ ತಮ್ಮ ಮನೆಯ ಸಮೀಪದ ರಸ್ತೆ ಬದಿಯಲ್ಲಿ ವಾಹನವನ್ನು ನಿಲ್ಲಿಸಿ ಮನೆಗೆ ತೆರಳಿದ್ದರು. ಮರುದಿನ ಬೆಳಗ್ಗೆ ಹಾಲಿನ ಡೈರಿಗೆ ಹಾಲು ಹಾಕುವುದಕ್ಕೆ ತೆರಳಲು ವಾಹನದ ಬಳಿಗೆ ಬಂದಾಗ ದ್ವಿಚಕ್ರ
ವಾಹನ ಸಂಪೂರ್ಣ ಸುಟ್ಟು ಕರಕಲಾಗಿರುವುದು ಕಂಡು ಬಂದಿದೆ.

ದ್ವಿಚಕ್ರ ವಾಹನ ಸಂಪೂರ್ಣ ಸುಟ್ಟು ಕರಕಲಾದ್ದರಿಂದ 20000 ರೂ. ನಷ್ಟ ಸಂಭವಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕೃತ್ಯ ಎಸಗಿದವರ ಪತ್ತೆ ಕಾರ್ಯ ನಡೆಯಲಿದೆ.

You may also like

Leave a Comment