Home » ಖ್ಯಾತ ಹಿನ್ನೆಲೆ ಗಾಯಕಿ ಸಂಗೀತ ನಿಧನ!

ಖ್ಯಾತ ಹಿನ್ನೆಲೆ ಗಾಯಕಿ ಸಂಗೀತ ನಿಧನ!

by Mallika
0 comments

ಕನ್ನಡ, ಮಲಯಾಳಿ, ತಮಿಳು ಮತ್ತು ತೆಲುಗು ಭಾಷೆಗಳ ಹಲವಾರು ಚಿತ್ರಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಧ್ವನಿ ನೀಡಿದ ಖ್ಯಾತ ಗಾಯಕಿ ಸಂಗೀತಾ ಸಚಿತ್ ನಿಧನರಾಗಿದ್ದಾರೆ. ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಇದಕ್ಕಾಗಿ ಚಿಕಿತ್ಸೆಗೊಳಗಾಗಿದ್ದರು. ಇವರಿಗೆ ,46 ವರ್ಷ ವಯಸ್ಸಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ತಮಿಳಿನ ನಾಲೈ ತೀರ್ಪು ಚಿತ್ರದಲ್ಲಿ ಹಾಡುವ ಮೂಲ ಸಂಗೀತ ಸಾಮ್ರಾಜ್ಯಕ್ಕೆ ಬಂದಿದ್ದ ಸಂಗೀತಾ ಅವರು ಅನೇಕ ಹಿಟ್ ಹಾಡುಗಳನ್ನು ಹಾಡಿದ್ದಾರೆ. ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಸಂಯೋಜಿಸಿದ ತಮಿಳು ಚಲನಚಿತ್ರ ಮಿಸ್ಟರ್ ರೋಮಿಯೋ ಈ ಚಿತ್ರದಲ್ಲಿನ ‘ತಣ್ಣೀರೈ ಕತಲಿಕ್ಕುಮ್’ ಹಾಡನ್ನು ಸಂಗೀತಾ ಅವರು ಹಾಡಿದ್ದು ಈ ಹಾಡು ಸೂಪರ್ ಹಿಟ್ ಆಗಿತ್ತು.

ಇವರ ಹಾಡಿಗೆ ಮನಸೋತಿದ್ದ ತಮಿಳುನಾಡು ಮಾಜಿ ಸಿಎಂ ದಿ.ಜಯಲಲಿತಾ ಅವರು ಕಾರ್ಯಕ್ರಮವೊಂದರಲ್ಲಿ ತಾವು ಧರಿಸಿದ್ದ 10 ಪವನ ಚಿನ್ನದ ಸರವನ್ನು ಗೌರವಾರ್ಥವಾಗಿ ಉಡುಗೊರೆಯಾಗಿ ನೀಡಿದ್ದರು.

You may also like

Leave a Comment