Home » ಮಂಗಳೂರು : ನಟ ಸುನೀಲ್ ಬಜಾಲ್ ನಿಧನ

ಮಂಗಳೂರು : ನಟ ಸುನೀಲ್ ಬಜಾಲ್ ನಿಧನ

0 comments

ಮನರಂಜನಾ ಕ್ಷೇತ್ರದಲ್ಲಿ ಖ್ಯಾತರಾಗಿದ್ದ ನಟ ಸುನೀಲ್ ಬಜಾಲ್ (45) ಅವರು ಮೇ 22 ರಂದು ಭಾನುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಸುನಿಲ್ ಅವರು ಕೊಂಕಣಿ ನಾಟಕದ ಮೂಲಕ ನಟನಾ ವೃತ್ತಿ ಪ್ರಾರಂಭಿಸಿ ಬಳಿಕ ಕೊಂಕಣಿ ಧಾರಾವಾಹಿಗಳಲ್ಲಿ ನಟಿಸಿ ಎಲ್ಲರ ಮನಸ್ಸಿನಲ್ಲಿ ನೆಲೆಯೂರಿದ್ದರು.

ಇನ್ನು ಮಂಗಳೂರಿನ ಕೊಂಕಣಿ ನಾಟಕ ಸಭಾದ ರಕ್ತಿಯ ಸದಸ್ಯರೂ ಆಗಿದ್ದ ಅವರ ವೃತ್ತಿಯಲ್ಲಿ ಐಟಿಐ ವಿದ್ಯಾರ್ಥಿಗಳಿಗೆ ಶಿಕ್ಷಕರಾಗಿದ್ದರು. ಮೃತರು ಪತ್ನಿ ಇಬ್ಬರು ಮಕ್ಕಳು ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ.

ಫ್ಲ್ಯಾಟ್ ನಂ. 403 ಧಾರವಾಹಿಯಲ್ಲಿನ ಬೆನ್ನ ಪಾತ್ರ ಇವರಿಗೆ ಹೆಚ್ಚಿನ ಹೆಸರನ್ನು ತಂದುಕೊಟ್ಟಿತ್ತು.ಕೊಂಕಣಿ ಧಾರವಾಹಿ ಗಾಡ್ ಫಾದರ್, ಮತ್ತು ಕೇಂದಣಿ ಚಲನಚಿತ್ರ ಕೊಂಬ್ಯಾಟ್ ನಲ್ಲಿ ಸಹ ನಟಿಸಿದ್ದಾರೆ.

You may also like

Leave a Comment