Home » ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ!! ಘಟನೆಯ ತೀವ್ರತೆಗೆ ಕಾರಿನ ಮೇಲೆ ಬಿದ್ದ ಸವಾರನ ಮೃತದೇಹ

ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ!! ಘಟನೆಯ ತೀವ್ರತೆಗೆ ಕಾರಿನ ಮೇಲೆ ಬಿದ್ದ ಸವಾರನ ಮೃತದೇಹ

0 comments

ಬೈಕ್ ಹಾಗೂ ಕಾರೊಂದರ ನಡುವೆ ನಡೆದ ಭೀಕರ ಅಪಘಾತಕ್ಕೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಚಾಮರಾಜನಗರದ ಕೊಳ್ಳೇಗಾಲದ ನರಿಪುರ ಎಂಬಲ್ಲಿ ನಡೆದಿದ್ದು, ಅಪಘಾತದ ತೀವ್ರತೆಗೆ ಬೈಕ್ ಸವಾರನ ಮೃತದೇಹ ಕಾರಿನ ಮೇಲೆ ಹಾರಿ ಬಿದ್ದಿದ್ದು ಪ್ರತ್ಯಕ್ಷದರ್ಶಿಗಳನ್ನು ಬೆಚ್ಚಿಬೀಳಿಸಿದೆ.

ಮೃತ ಸವಾರನನ್ನು ಉಮ್ಮತ್ತೂರು ನಿವಾಸಿ ಮಹಾದೇವ ಸ್ವಾಮಿ ಎಂದು ಗುರುತಿಸಲಾಗಿದ್ದು,ಗಂಭೀರ ಗಾಯಗೊಂಡ ಸಹಸವಾರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ನಡೆದ ಸಂದರ್ಭ ಅದೇ ಮಾರ್ಗವಾಗಿ ತೆರಳುತ್ತಿದ್ದ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿಯವರು ಗಾಯಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದ್ದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

You may also like

Leave a Comment