Home » ಉಡುಪಿ: ಜಾರು ಬಂಡೆಯಲ್ಲಿ ಆಟವಾಡಲು ಹೋದ ಬಾಲಕ, ಕೈಕಾಲು ತೊಳೆಯಲು ಕೆರೆಗೆ ಇಳಿದಾಗ, ಕಾಲು ಜಾರಿ ಸಾವು

ಉಡುಪಿ: ಜಾರು ಬಂಡೆಯಲ್ಲಿ ಆಟವಾಡಲು ಹೋದ ಬಾಲಕ, ಕೈಕಾಲು ತೊಳೆಯಲು ಕೆರೆಗೆ ಇಳಿದಾಗ, ಕಾಲು ಜಾರಿ ಸಾವು

0 comments

ಉಡುಪಿ: ಕಾಲು ತೊಳೆಯಲೆಂದು ಕೆರೆಗೆ ಇಳಿದಿದ್ದ ಬಾಲಕನೋರ್ವ, ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆಯೊಂದು ಉಡುಪಿಯ ಕಡೆಕಾರಿನ ಭಜನಾ ಮಂದಿರದ ಬಳಿ ನಡೆದಿದೆ.

ಕಡೆಕಾರು ನಿವಾಸಿ ಗಿರೀಶ್ ಉಪಾಧ್ಯಾಯ ಎಂಬವರ ಮಗ ರಾಘವ (8) ಮೃತಪಟ್ಟ ದುರ್ದೈವಿ ಮಗು.

ನಿನ್ನೆ ಸಂಜೆಯ ಸಮಯದಲ್ಲಿ ಬಾಲಕ ಜಾರುಬಂಡೆಯಲ್ಲಿ ಆಟವಾಡಲು ಹೋಗಿದ್ದ. ಆಟದ ನಂತರ ಕೈಕಾಲು ತೊಳೆಯಲು ಕೆರೆಗೆ ಇಳಿದ ಸಂದರ್ಭ ಕಾಲು ಜಾರಿ ಬಿದ್ದು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಶನಿವಾರ ರಾತ್ರಿ 12 ಗಂಟೆಯವರೆಗೆ ಹುಡುಕಾಟ ನಡೆಸಿದರೂ ಪತ್ತೆಯಾಗದ ಕಾರಣ ಇಂದು ಬೆಳಿಗ್ಗೆ ಮುಳುಗು ತಜ್ಞ ಈಶ್ವರ ಮಲ್ಪೆ ಅವರು ಬಾಲಕನ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.

You may also like

Leave a Comment