Home » ‘Sorry sorry’ ಎಂದು ಸಿಕ್ಕಿದ್ದಲ್ಲೆಲ್ಲ ಗೀಚಿದ ವಿಚಿತ್ರ ವ್ಯಕ್ತಿ!

‘Sorry sorry’ ಎಂದು ಸಿಕ್ಕಿದ್ದಲ್ಲೆಲ್ಲ ಗೀಚಿದ ವಿಚಿತ್ರ ವ್ಯಕ್ತಿ!

0 comments

ಈ ಜಗತ್ತು ಎಷ್ಟು ವಿಸ್ಮಯವೋ, ಅಷ್ಟೇ ವಿಚಿತ್ರವಾದ ಜನಗಳು ಇದ್ದಾರೆ ಎಂದರೆ ತಪ್ಪಾಗಲ್ಲ. ಯಾಕಂದ್ರೆ ದಿನದಿಂದ ದಿನಕ್ಕೆ ವಿಚಿತ್ರವಾದ ವರ್ತನೆಯ ಜನರು ಕಾಣ ಸಿಗುತ್ತಿದ್ದಾರೆ. ಹೌದು. ಇಲ್ಲೊಬ್ಬ ವ್ಯಕ್ತಿ ಊರು ತುಂಬಾ ‘ಸ್ವಾರಿ ಸ್ವಾರಿ’ ಎಂದು ಸಿಕ್ಕಿದ್ದಲ್ಲೇಲ್ಲಾ ಗೀಚಿದ್ದಾನೆ.

ಬೆಂಗಳೂರಿನ ಸುಂಕದಕಟ್ಟೆಯ ಶಾಂತಿಧಾಮ ಸ್ಕೂಲ್ ಬಳಿ
ತಡರಾತ್ರಿಯಲ್ಲಿ ಈ ರೀತಿ ಹುಚ್ಚಾಟ ಮೆರೆಯಲಾಗಿದ್ದು, ಈ ರೀತಿ ಯಾವ ವ್ಯಕ್ತಿ ಕ್ಷಮೆಯಾಚಿದ್ದಾನೆ ಎಂಬುದು ತಿಳಿದಿಲ್ಲ. ಸ್ಕೂಲ್ ನ ಕಾಂಪೌಂಡ್, ಮೆಟ್ಟಿಲು, ರಸ್ತೆ ಹೀಗೆ ಎಲ್ಲಾ ಕಡೆ ಸ್ವಾರಿ ಅಂತಾ ಬರೆದಿದ್ದಾನೆ. ಅದ್ಯಾವುದೋ ಗೀಳು ಹಚ್ಚಿಕೊಂಡು ಹೀಗೆ ಬರೆದಿದ್ದಾನೆ. ಯಾವುದೋ ತಪ್ಪೆಸಗಿ ಈಗ ಆ ಪಶ್ಚಾತ್ತಾಪದ ಬೇಗೆಯಲ್ಲಿ ಹಾಗೇ ಸಿಕ್ಕ ಸಿಕ್ಕಲ್ಲಿ sorry ಕೇಳುತ್ತಿದ್ದಾನೆ ಎನ್ನಲಾಗಿದೆ.

ಈತನ ಈ ಬರವಣಿಗೆಯನ್ನು ಬೆಳಗ್ಗೆ ಎದ್ದು ನೋಡಿದ ಸ್ಥಳೀಯರಿಗೆ ಶಾಕ್ ಆಗಿದೆ. ಆದರೆ, ಯಾರು ಈ ರೀತಿ ‘Sorry’ ಕೇಳಿರುವುದು ಎಂದು ತಿಳಿಯದೆ, ಸ್ಥಳೀಯರು ಕೂಡ ತಲೆಕೆಡಿಸಿಕೊಂಡಿದ್ದಾರೆ. ಇತ್ತ ಪೊಲೀಸರು ಕೂಡ Sorry ಬರೆದ ವ್ಯಕ್ತಿ ಯಾರು ಎಂಬುದನ್ನು ಪತ್ತೆಹಚ್ಚಲು ಫೀಲ್ಡ್ ಗಿಳಿದಿದ್ದಾರೆ. ಒಟ್ಟಾರೆ ಈತನ ‘ಸ್ವಾರಿ’ ಹಿಂದಿರುವ ರಹಸ್ಯ ಇನ್ನಷ್ಟೇ ಬಯಲಾಗಬೇಕಿದೆ.

You may also like

Leave a Comment