Home » ತಂದೆ ಮೇಲಿನ ಸೇಡಿಗೆ ಎರಡೂವರೆ ವರ್ಷದ ಮಗನನ್ನೇ ಕೊಲೆ ಮಾಡಿದ್ದ ಆರೋಪಿಗಳು ಅಂದರ್

ತಂದೆ ಮೇಲಿನ ಸೇಡಿಗೆ ಎರಡೂವರೆ ವರ್ಷದ ಮಗನನ್ನೇ ಕೊಲೆ ಮಾಡಿದ್ದ ಆರೋಪಿಗಳು ಅಂದರ್

0 comments

ಕಲಬುರಗಿ: ತಂದೆ ಮೇಲಿನ ಸೇಡನ್ನು ತೀರಿಸಲು ಆತನ ಎರಡೂವರೆ ವರ್ಷದ ಮಗನನ್ನೇ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ, ಆರು ತಿಂಗಳ ಬಳಿಕ ಕೊಲೆ ಪ್ರಕರಣ ಭೇದಿಸಿದ ಕಲಬುರಗಿ ವಿವಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಪಿರ್ದೋಶ್ ಕಾಲೋನಿ ನಿವಾಸಿಗಳಾದ ನವಾಜ್, ಸದ್ದಾಂ, ಸೋಹೆಲ್, ಜಹೀರ್ ಎಂದು ಗುರುತಿಸಲಾಗಿದೆ.

ಪ್ರಕರಣದ ವಿವರ:
ಕಳೆದ ವರ್ಷ ಡಿಸೆಂಬರ್ 6ರಂದು ಪಿರ್ದೋಶ್ ಕಾಲೋನಿಯ ಬಾಲಕ ಮಹ್ಮದ್ ಮುಜಮಿಲ್ ಕೊಲೆ ಮಾಡಲಾಗಿತ್ತು. ಬಾಲಕನ ತಂದೆ ನಿಸಾರ್ ಅಹ್ಮದ್ ಜೊತೆ ದ್ವೇಷ ಹೊಂದಿದ್ದ ನವಾಜ್, ತಂದೆ ಮೇಲಿನ ಸೇಡನ್ನು ಆತನ ಮಗನ ಮೇಲೆ ತೀರಿಸಿಕೊಂಡಿದ್ದಾನೆ. ನವಾಜ್, ತನ್ನ ಸಹಚರರ ಜೊತೆ ಸೇರಿ ಬಾಲಕನ ಕೊಲೆ ಮಾಡಿಸಿದ್ದ.

ಈ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದ್ರೆ ಆರು ತಿಂಗಳಾದ್ರು ಕೂಡಾ ಆರೋಪಿಗಳು ಪತ್ತೆಯಾಗಿರಲಿಲ್ಲ. ಸದ್ಯ ಈಗ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

You may also like

Leave a Comment