Home » ತಂದೆಯ ಮದ್ಯದ ಹುಚ್ಚು ಬಿಡಿಸಲು ತಯಾರಿಸಿದ ಔಷಧ ಮಿಶ್ರಣ ಬಜ್ಜಿಯನ್ನು ಸೇವಿಸಿ ಬಾಲಕ ಸಾವು!

ತಂದೆಯ ಮದ್ಯದ ಹುಚ್ಚು ಬಿಡಿಸಲು ತಯಾರಿಸಿದ ಔಷಧ ಮಿಶ್ರಣ ಬಜ್ಜಿಯನ್ನು ಸೇವಿಸಿ ಬಾಲಕ ಸಾವು!

0 comments

ಕಲಬುರಗಿ : ತಂದೆಯ ಮದ್ಯದ ಹುಚ್ಚು ಬಿಡಿಸಲು ತಯಾರಿಸಿದ ಔಷಧ ಮಿಶ್ರಣ ಬಜ್ಜಿಯನ್ನು ಸೇವಿಸಿ ಬಾಲಕ ಸಾವನ್ನಪ್ಪಿದ ಘಟನೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ.

ಮೃತ ಬಾಲಕನನ್ನು ಬಸವನಕಣಿ ಬಡಾವಣೆಯ ನಿವಾಸಿ ವಿಷ್ಣು ಜಾಧವ್(8) ಎಂದು ಗುರುತಿಸಲಾಗಿದೆ.

ಔಷಧ ಮಿಶ್ರಣ ಮಾಡಿ ಇಡಲಾಗಿದ್ದ ಬಜ್ಜಿ ಸೇವಿಸಿದ್ದಾನೆ. ನಂತರ ವಾಂತಿ, ಬೇಧಿಯಿಂದ ಬಳಲಿ ಬಾಲಕನೋರ್ವ ಸಾವನಪ್ಪಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆ ನಿನ್ನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಬಾಲಕನ ತಂದೆಗೆ ವಿಪರೀತ ಮದ್ಯ ಸೇವನೆಯ ಚಟವಿತ್ತು. ಅದನ್ನು ಬಿಡಿಸಲು ಬಜ್ಜಿಯಲ್ಲಿ ಔಷಧ ಮಿಶ್ರಣ ಮಾಡಿಡಲಾಗಿತ್ತು. ಬಾಲಕ ಆ ಬಜ್ಜಿಯನ್ನು ತಿಂದಿದ್ದ. ಇದೇ ಕಾರಣಕ್ಕೆ ವಾಂತಿ, ಬೇಧಿ ಶುರುವಾಗಿತ್ತಾ? ಅಥವಾ ಬೇರೆ ಕಾರಣಕ್ಕಾ? ಎಂಬುವುದು ಇನ್ನೂ ಸ್ಪಷ್ಟವಾಗಿಲ್ಲ.

ಹೀಗಾಗಿ, ಬಾಲಕನ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕುಟುಂಬಸ್ಥರು ಈ ಬಗ್ಗೆ ಯಾವುದೇ ದೂರು ಸಹ ದಾಖಲಿಸದೆ, ಅಂತ್ಯಸಂಸ್ಕಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

You may also like

Leave a Comment