Home » ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಸೂಪರ್ ಸ್ಟಾರ್ ಜೆಕೆ !! | ನಟನ ಕೈ ಹಿಡಿಯುತ್ತಿರುವ ಹುಡುಗಿ ಇವರೇ ನೋಡಿ

ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಸೂಪರ್ ಸ್ಟಾರ್ ಜೆಕೆ !! | ನಟನ ಕೈ ಹಿಡಿಯುತ್ತಿರುವ ಹುಡುಗಿ ಇವರೇ ನೋಡಿ

0 comments

ಚಂದನವನದಲ್ಲಿ ಇನ್ನೊಂದು ಮದುವೆ ಸೆಟ್ಟೇರಲಿದೆ. ನಟ ಜೆಕೆ ಅಲಿಯಾಸ್ ಕಾರ್ತಿಕ್ ಜಯರಾಮ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದು, ಸದ್ಯದಲ್ಲೇ ಅವರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಕಿರುತೆರೆಯ ಅತ್ಯಂತ ಜನಪ್ರಿಯ ಧಾರಾವಾಹಿ ‘ಅಶ್ವಿನಿ ನಕ್ಷತ್ರ’ದಲ್ಲಿ ‘ಹೆಂಡ್ತಿ..’ ಡೈಲಾಗ್ ಮೂಲಕವೇ ಇವರು ಫೇಮಸ್ ಆಗಿದ್ದರು. ಈಗ ಹೆಂಡತಿಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಕೊನೆಗೂ ಸಪ್ತಪದಿ ತುಳಿಯುತ್ತಿದ್ದಾರೆ.

ಜೆಕೆ ಅಭಿಮಾನಿಗಳು ಅವರನ್ನು ಕೇಳುತ್ತಿದ್ದ ಪ್ರಶ್ನೆ ಎಂದರೆ, ‘ಯಾವಾಗ ಮದುವೆ ಆಗುತ್ತೀರಿ?’ ಎಂದು. ಈ ಪ್ರಶ್ನೆಗೆ ಜೆಕೆ ಫ್ಯಾಷನ್ ಡಿಸೈನರ್ ಚೆಲುವೆಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಉತ್ತರಿಸಿದ್ದಾರೆ. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹೇಳುವ ಮೂಲಕ ಭಾವಿ ಪತ್ನಿಯನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.

ಅಂದಹಾಗೆ ಜೆಕೆ ಮದುವೆ ಆಗುತ್ತಿರುವ ಹುಡುಗಿಯ ಹೆಸರು ಅರ್ಪಣ. ವೃತ್ತಿಯಲ್ಲಿ ನುರಿತ ಫ್ಯಾಷನ್ ಡಿಸೈನರ್. ಫ್ಯಾಷನ್ ಲೋಕಕ್ಕೆ ಈಗಾಗಲೇ ಚಿರಪರಿಚಿತ ಆಗಿರುವ ಅಪರ್ಣ, ಸಾಕಷ್ಟು ಮಾಡೆಲ್ ಗಳಿಗೆ ಹೊಸ ರೀತಿಯ ಫ್ಯಾಷನ್ ಡಿಸೈನ್ ಮಾಡಿದ್ದಾರೆ. ಅಲ್ಲದೇ, ಸಿಲೆಬ್ರಿಟಿಗಳ ನೆಚ್ಚಿನ ಡಿಸೈನರ್ ಕೂಡ ಇವರಾಗಿದ್ದಾರೆ.

ತಾವು ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅಪರ್ಣ ಸಮಂತ್, ತಮ್ಮಿಬ್ಬರ ಫೋಟೋ ಜೊತೆಗೆ ಲೈಫ್ ಲೈನ್ ಎಂದು ಬರೆದುಕೊಂಡು, ಮದುವೆ ಆಗುತ್ತಿರುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

You may also like

Leave a Comment