Home » ಮಂಗಳೂರು : ನಗರದ ಕಾಲೇಜಿನಲ್ಲಿ ನಡೆದ ಹಲ್ಲೆ ಪ್ರಕರಣ | ಪೊಲೀಸರಿಂದ 8 ಮಂದಿಯ ಬಂಧನ

ಮಂಗಳೂರು : ನಗರದ ಕಾಲೇಜಿನಲ್ಲಿ ನಡೆದ ಹಲ್ಲೆ ಪ್ರಕರಣ | ಪೊಲೀಸರಿಂದ 8 ಮಂದಿಯ ಬಂಧನ

0 comments

ಮಂಗಳೂರು: ಮೇ. 28 ರಂದು ನಗರದ ಕಾಲೇಜಿನಲ್ಲಿ ನಡೆದ ಗಲಾಟೆ ಹಲ್ಲೆ ಪ್ರಕರಣದ ಆರೋಪವೊಂದರ 8 ಮಂದಿಯನ್ನು ಉರ್ವಾ ಠಾಣಾ ಪೊಲೀಸರು ಬಂಧಿಸಿದ್ದಾರೆ.

ದ್ವೇಷದಿಂದ ಅಪಾರ್ಟ್‌ಮೆಂಟ್‌ಗೆ ನುಗ್ಗಿ ವಿದ್ಯಾರ್ಥಿಯೋರ್ವನ ಮೇಲೆ ಎದುರಾಳಿ ವಿದ್ಯಾರ್ಥಿ ತಂಡ ವಿಕೆಟ್ ಕೀಪರ್‌ನಿಂದ ಹಲ್ಲೆ ನಡೆಸಿದ ಪ್ರಕರಣ ಇದಾಗಿತ್ತು.

ಬಂಧಿತ ಆರೋಪಿಗಳನ್ನು ಮೊಹಮ್ಮದ್ ಅಫ್ರೀಶ್, ಸುನೈಫ್, ಶೇಖ್ ಮೊಹಿದ್ದೀನ್, ಇಬ್ರಾಹಿಂ ರಾಝೀ, ಮೊಹಮ್ಮದ್ ಸಿನಾನ್, ಮೊಹಮ್ಮದ್ ಆಶಾಮ್, ಮೊಹಮ್ಮದ್ ಸಯ್ಯದ್, ಮೊಹಮ್ಮದ್ ಅಫಮ್ ಎಂದು ಗುರುತಿಸಲಾಗಿದೆ.

ಘಟನೆ ವಿವರ : ದೇರಳಕಟ್ಟೆಯಲ್ಲಿರುವ ಖಾಸಗಿ ಕಾಲೇಜಿನಲ್ಲಿ ಮೇ.28 ರಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಎರಡು ತಂಡಗಳ ನಡುವೆ ಗಲಾಟೆ ನಡೆದಿತ್ತು. ಇದೇ ದ್ವೇಷದಲ್ಲಿ ಅದೇ ದಿನ ರಾತ್ರಿ 8.30ರ ವೇಳೆಗೆ ನಗರದ ಚಿಲಿಂಬಿಯಲ್ಲಿರುವ ಶಬಾಬ್ ಕೆ ವಾಸ್ತವ್ಯವಿದ್ದ ಅಪಾರ್ಟ್‌ಮೆಂಟ್‌ಗೆ ಮಾರಾಕಾಯುಧಗಳೊಂದಿಗೆ ನುಗ್ಗಿದ 12 ಮಂದಿ ತಂಡ ಅವಾಚ್ಯ ಶಬ್ದಗಳಿಂದ ಬೆದರಿಕೆ ಹಾಕಿದ್ದಾರೆ. ನಂತರ ವಿಕೆಟ್‌ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದರು.

ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು 12 ಮಂದಿ ಪೈಕಿ 8 ಮಂದಿಯನ್ನು ಬಂಧಿಸಿದ್ದಾರೆ. ಉಳಿದವರಿಗೆ ಶೋಧ ನಡೆಯುತ್ತಿದೆ.

You may also like

Leave a Comment