Home » ಸೆಕ್ಸ್ ನಿಲ್ಲಿಸಿ, ಇಲ್ಲವಾದರೆ….ಸರ್ಕಾರದ ಆರೋಗ್ಯ ಸಲಹೆ!!! ಯಾಕಾಗಿ?

ಸೆಕ್ಸ್ ನಿಲ್ಲಿಸಿ, ಇಲ್ಲವಾದರೆ….ಸರ್ಕಾರದ ಆರೋಗ್ಯ ಸಲಹೆ!!! ಯಾಕಾಗಿ?

0 comments

ಮಂಕಿಪಾಕ್ಸ್ ಹರಡದಂತೆ ನಿಯಂತ್ರಿಸಲು ಸೆಕ್ಸ್ ನಡೆಸದಿರಲು ಆರೋಗ್ಯ ಪ್ರಾಧಿಕಾರಗಳು ಮಂಗಳವಾರ ಹೊಸ ಮಾರ್ಗಸೂಚಿ ಹೊರಡಿಸಿದೆ. ಸೋಂಕಿನ ಲಕ್ಷಣವಿರುವವರೊಂದಿಗೆ ಸೆಕ್ಸ್ ಹೊಂದುವುದನ್ನು ತಡೆಗಟ್ಟಬೇಕು ಎಂದು ಪ್ರಮುಖವಾಗಿ ಹೇಳಿದೆ.

ಈ ವಾರದಲ್ಲಿ 71 ಪ್ರಕರಣಗಳ ಪತ್ತೆಯಾಗುವುದರೊಂದಿಗೆ ಒಟ್ಟಾರೆ ಪ್ರಕರಣಗಳ ಸಂಖ್ಯೆ 179ಕ್ಕೆ ಏರಿಕೆಯಾಗಿರುವುದರಿಂದ ಇಂಗ್ಲೆಂಡ್ ನಾದ್ಯಂತ ಆರೋಗ್ಯ ಪ್ರಾಧಿಕಾರಿಗಳು ಮಂಗಳವಾರ ಈ ಹೊಸ ಮಾರ್ಗಸೂಚಿ ಹೊರಡಿಸಿವೆ. ಸ್ಕಾಟ್ ಲ್ಯಾಂಡ್, ಉತ್ತರ ಐರ್ಲೆಂಡ್ ಮತ್ತು ವೆಲ್ಸ್ ಗಳ ಆರೋಗ್ಯ ಪ್ರಾಧಿಕಾರಗಳೊಂದಿಗೆ ಯುಕೆ ಆರೋಗ್ಯ ಸುರಕ್ಷತಾ ಏಜೆನ್ಸಿ ಈ ಹೊಸ ಆದೇಶ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮಂಕಿಪಾಕ್ಸ್ ಸೋಂಕಿತರು ಇತರರೊಂದಿಗೆ ನಿಕಟ ಸಂಪರ್ಕ ಹೊಂದುವುದನ್ನು ಸಹ ನಿಲ್ಲಿಸುವಂತೆ ಸಲಹೆ ನೀಡಿದೆ.

ಸೆಕ್ಸ್ ಮೂಲಕ ಮಂಕಿಪಾಕ್ಸ್ ಹರಡುವ ಬಗ್ಗೆ ಪುರಾವೆಗಳು ದೂರೆತಿರುವುದರಿಂದ ಅದಷ್ಟು ಅದನ್ನು ತಡೆಗಟ್ಟುವುದು ಒಳಿತು. ಇಲ್ಲವಾದರೆ ಮುಂಜಾಗ್ರತಾ ಕ್ರಮವಾಗಿ 8 ವಾರಗಳ ಕಾಲ ಕಾಂಡೋಮ್ ಬಳಸುವಂತೆ ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಸಾಮಾನ್ಯವಾಗಿ ಮಂಕಿಪಾಕ್ಸ್ ಜನರ ನಡುವೆ ಹರಡುವುದಿಲ್ಲ ಎಂಬುದರ ಬಗ್ಗೆ ಜನರಿಗೆ ಭರವಸೆ ನೀಡುತ್ತೇವೆ. ಒಟ್ಟಾರೇ ಸಾಮಾನ್ಯ ಜನರಿಗೆ ತೊಂದರೆ ಕಡಿಮೆಯಾಗಿದೆ ಎಂದು ವೆಲ್ಸ್ ನ ಹೆಲ್ತ್ ಪ್ರೊಟೆಕ್ಷನ್ ಫಾರ್ ಪಬ್ಲಿಕ್ ಹೆಲ್ತ್ ವಿಭಾಗದ ನಿರ್ದೇಶಕ ಅನಿವಾಸಿ ಭಾರತೀಯ ಡಾ. ಗಿರಿ ಶಂಕರ್ ಹೇಳಿದ್ದಾರೆ.

ಮಂಕಿಪಾಕ್ಸ್ ದೃಢಪಟ್ಟ ಜನರು 21 ದಿನಗಳ ಕಾಲ ಮನೆಯಲ್ಲಿಯೇ ಐಸೋಲೆಟೆಡ್ ಆಗಬೇಕು, ಅಷ್ಟು ಮಾತ್ರವಲ್ಲದೇ ತಮ್ಮ ದೇಹದ ಯಾವುದೇ ಭಾಗದಲ್ಲಾದರೂ ಹೊಸ ಗಾಯ ಅಥವಾ ದದ್ದು, ಕಲೆಗಳು, ಕಾಣಿಸಿಕೊಂಡರೆ ಗಮನ ಹರಿಸುವಂತೆ ಸಲಹೆ ನೀಡಲಾಗಿದೆ.

You may also like

Leave a Comment