Home » ಬಾರಿ ಮಳೆಗೆ ಬಾಳೆ ಬೆಳೆ ಹಾನಿ

ಬಾರಿ ಮಳೆಗೆ ಬಾಳೆ ಬೆಳೆ ಹಾನಿ

0 comments

ವಿಜಯಪುರ: ಮಂಗಳವಾರ ರಾತ್ರಿ ಸುರಿದ ಭಾರಿ ಮಳೆ, ಗಾಳಿಗೆ ಅಪಾರ ಪ್ರಮಾಣದ ಬಾಳೆ ಬೆಳೆ ಹಾನಿಯಾಗಿರುವ ಪ್ರಕರಣ ವಿಜಯಪುರ ಜಿಲ್ಲೆಯ ನಾಲತ್ವಾಡ ಪಟ್ಟಣದ ಆಲೂರು ರಸ್ತೆಯಲ್ಲಿ ನಡೆದಿದೆ.

ರೈತ ಈರಪ್ಪ ಮಲ್ಲಪ್ಪ ಕಸಬೇಗೌಡರ ಬಾಳೆ ತೋಟದಲ್ಲಿ ಸಂಪೂರ್ಣ ಹಾನಿಯಾಗಿದೆ. ಒಂದುವರೆ ಎಕರೆ ಜಮೀನಿನಲ್ಲಿ ರೈತ ಈರಪ್ಪ ಕಸಬೇಗೌಡರ ಬೆಳೆದ ಸುಮಾರು 350 ಬಾಳೆ ಕಾಯಿ ಸಮೇತ ನೆಲಕ್ಕೆ ಉರಳಿದೆ. ಇನ್ನೂ 25 ದಿನಗಳಲ್ಲಿ ಬಾಳೆ ಬೆಳೆಗಳು ಕೈಗೆ ಬರುತ್ತಿತ್ತು. ಇದೀಗ ಭಾರೀ ಮಳೆ, ಗಾಳಿಯಿಂದ ನೆಲಕ್ಕೆ ಉರುಳಿ ಸಂಕಷ್ಟ ಎದುರಾಗಿದೆ. ಸರ್ಕಾರ ಪರಿಹಾರ ನೀಡಬೇಕು ಎಂದು ರೈತ ಈರಪ್ಪ ಮನವಿ ಮಾಡಿದ್ದಾರೆ.

You may also like

Leave a Comment