Home » ಸುರತ್ಕಲ್ : ಕುಡಿದು ಟೈಟ್ ಆದ ಚಾಲಕನಿಂದ ವಾಹನ ಚಾಲನೆ | ಸಿಕ್ಕಸಿಕ್ಕಲ್ಲಿ ವಾಹನಗಳಿಗೆ ಡಿಕ್ಕಿ | ಹಲವರಿಗೆ ಗಾಯ

ಸುರತ್ಕಲ್ : ಕುಡಿದು ಟೈಟ್ ಆದ ಚಾಲಕನಿಂದ ವಾಹನ ಚಾಲನೆ | ಸಿಕ್ಕಸಿಕ್ಕಲ್ಲಿ ವಾಹನಗಳಿಗೆ ಡಿಕ್ಕಿ | ಹಲವರಿಗೆ ಗಾಯ

0 comments

ಪಣಂಬೂರು : ಪಣಂಬೂರು ಕಡೆಯಿಂದ ಎಂಆರ್‌ಪಿಎಲ್ ಕಡೆಗೆ ಹೋಗುತ್ತಿದ್ದ 16 ಚಕ್ರಗಳ ಟ್ರಕ್‌ಅನ್ನು ಅದರ ಚಾಲಕ ಕುಡಿದ ಮತ್ತಿನಲ್ಲಿ ಅತೀವೇಗದಿಂದ ಯದ್ವಾತದ್ವ ಚಲಾಯಿಸಿಕೊಂಡು ಬಂದು ಕಾರು, ಬೈಕ್ ಹಾಗೂ ರಿಕ್ಷಾ ವೊಂದಕ್ಕೆ ಡಿಕ್ಕಿ ಹೊಡೆದ ಘಟನೆಯೊಂದು ಬುಧವಾರ ರಾತ್ರಿ ನಡೆದಿದೆ.

ಸುರತ್ಕಲ್ ಸಮೀಪದ ಕಾನ ಬಳಿ ಪೊಲೀಸರು ಹಾಗೂ ಸಾರ್ವಜನಿಕರು ಬೆನ್ನಟ್ಟಿ ಲಾರಿಯನ್ನು ಪತ್ತೆ ಹಚ್ಚಿ ಚಾಲಕನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಚಾಲಕ ಕೈಲಾಶ್ ಪಾಟೀಲ್ (42) ನನ್ನು ಬಂಧಿಸಲಾಗಿದೆ. ಕ್ಲೀನರ್ ಪರಾರಿಯಾಗಿದ್ದಾನೆ.

ಸುರತ್ಕಲ್ ಜಂಕ್ಷನ್‌ನಲ್ಲಿ ದ್ವಿಚಕ್ರ ಸವಾರನಿಗೆ ಡಿಕ್ಕಿ ಹೊಡೆದು ಬಳಿಕ ಪೊಲೀಸ್ ಪಟ್ರೋಲ್ ವಾಹನಕ್ಕೆ ಗುದ್ದಿದ್ದಾನೆ. ಈ ವೇಳೆ ಲಾರಿ ನಿಲ್ಲಿಸದೆ ಕಾನದತ್ತ ಪಲಾಯನವಾಗುವ ಸಂದರ್ಭ ಸುರತ್ಕಲ್ ರೈಲ್ವೇ ಬ್ರಿಡ್ಜ್ ಬಳಿ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ರಿಕ್ಷಾ ಪಲ್ಟಿಯಾಗಿ ಮೂವರಿಗೆ ಗಾಯವಾಗಿತ್ತು. ಇದಕ್ಕೂ ಮುನ್ನ ಬೈಕಂಪಾಡಿ ಹಾಗೂ ಸುರತ್ಕಲ್ ಬಸ್ ನಿಲ್ದಾಣದ ಬಳಿ ಕಾರಿಗೆ ಡಿಕ್ಕಿ ಹೊಡೆದಿದ್ದ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

You may also like

Leave a Comment