Home » ವಿಶ್ವ ಬೈಸಿಕಲ್ ದಿನಾಚರಣೆ .//

ವಿಶ್ವ ಬೈಸಿಕಲ್ ದಿನಾಚರಣೆ .//

0 comments

ವಿಶ್ವ ಬೈಸಿಕಲ್ ದಿನಾಚರಣೆಯನ್ನು ಚಿತ್ರದುರ್ಗದಲ್ಲಿ ಆಯೋಜಿಸಲಾಗಿತ್ತು .

ಜಾಥವನ್ನು ನೆಹರು ಯುವ ಕೇಂದ್ರ ಚಿತ್ರದುರ್ಗ, ಸ್ವಾಮಿ ವಿವೇಕಾನಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಹಾಗೂ ಚಿತ್ರದುರ್ಗದ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕ ನುಡಿಯನ್ನು ಶ್ರೀಯುತ ಸುಹಾಸ್, ಎನ್ , ಜಿಲ್ಲಾ ಯುವ ಸಮನ್ವಯ ಅಧಿಕಾರಿಗಳು ನೆಹರು ಯುವ ಕೇಂದ್ರ ಚಿತ್ರದುರ್ಗ ಇವರು ನೆರವೇರಿಸಿದರು.

ನಂತರ ಅಂತರಾಷ್ಟ್ರೀಯ ಕ್ರೀಡಾಪಟು ಆದ ಶ್ರೀಯುತ ನಾಗಭೂಷಣ ಹಾಗೂ ಶ್ರೀಯುತ ಕೋತಿರಾಜ್ ಸಾಹಸಿ ಕ್ರೀಡಾಪಟು ಹಾಗೂ ಶ್ರೀಯುತ ಮಜಹರ್ ಉಲ್ಲಾ
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚಿತ್ರದುರ್ಗ ಇವರುಗಳು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸೈಕಲ್ ಜಾಥಾ ಕೋಟೆ ಮುಂಭಾಗದಿಂದ ಉಚ್ಚಂಗಿ ಯಲ್ಲಮ್ಮ ದೇವಸ್ಥಾನ ಮದಕರಿ ವೃತ್ತ ಅಂಬೇಡ್ಕರ್ ವೃತ್ತ ಚಿತ್ರದುರ್ಗದ ಮುಖ್ಯ ರಸ್ತೆಯ ಗಾಂಧಿವೃತ್ತ ದಿಂದ ಪ್ರವಾಸಿ ಮಂದಿರದ ಮುಂಭಾಗದ ಮೂಲಕ ಓಬವ್ವ ವೃತ್ತಕ್ಕೆ ಬಂದು ಮುಕ್ತಾಯವಾಯಿತು.

ಈ ಕಾರ್ಯಕ್ರಮದಲ್ಲಿ
ಶ್ರೀಯುತ ಚೇತನ್ ಬಾಬು
ಅಧ್ಯಕ್ಷರು
ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ ಚಿತ್ರದುರ್ಗ
ಶ್ರೀಯುತ ರವಿಕುಮಾರ್
ಸಂಚಾಲಕರು
ಯುವ ಬ್ರಿಗೇಡ್ ಚಿತ್ರದುರ್ಗ
ಶ್ರೀಯುತ ಯಳನಾಡು ಬಡಗಿ ದಾಸಪ್ಪನ ಮಗ ಕರಿಯಣ್ಣ
ಸಂಸ್ಥಾಪಕರು
ನಮ್ಮನಾಡು ಯುಟ್ಯೂಬ್ ಚಾನೆಲ್,
ಅಧ್ಯಕ್ಷರು, ಸ್ವಾಮಿ ವಿವೇಕಾನಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಹೊಸಯಳನಾಡು, ಶ್ರೀಯುತ ಬ್ರಿಜೇಶ್ ಯುವ ಹಿಂದುಸ್ತಾನ್ ಸಾಮಾಜಿಕ ಕಾರ್ಯಕರ್ತ ಚಿತ್ರದುರ್ಗ, ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ ನ ಸದಸ್ಯರು, ಪೋರ್ಟ್ ಸಿಟಿ ಬೈಸಿಕಲ್ ಕ್ಲಬ್ ನ ಸದಸ್ಯರು ಮತ್ತು ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

You may also like

Leave a Comment