Home » ಕಾರ್ಕಳದಲ್ಲಿ ರಸ್ತೆಗೆ ಗಾಂಧಿ ಹಂತಕ “ಗೋಡ್ಸೆ” ಹೆಸರು!

ಕಾರ್ಕಳದಲ್ಲಿ ರಸ್ತೆಗೆ ಗಾಂಧಿ ಹಂತಕ “ಗೋಡ್ಸೆ” ಹೆಸರು!

0 comments

ಕಾರ್ಕಳ : ತಾಲೂಕಿನ ಬೋಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದಿಢೀರ್ ಎಂದು ರಸ್ತೆಯೊಂದಕ್ಕೆ ನಾಥರಾಮ್ ಗೋಡ್ಸೆ ಎಂದು ಹೆಸರಿಟ್ಟಿರುವ ನಾಮಫಲಕ ಕಾಣಿಸಿಕೊಂಡಿದೆ. ಎರಡು ದಿನಗಳ ಹಿಂದೆಯೇ ಈ ನಾಮಫಲಕವನ್ನು ಅಳವಡಿಸಲಾಗಿದೆ ಎನ್ನಲಾಗುತ್ತಿದೆ.

ಈ ಫಲಕವನ್ನು ಬೋಳ ಗ್ರಾಮ ಪಂಚಾಯತ್‌ನ ಪಡುಗಿರಿ -ಪಡುಬಿದ್ರಿ ರಸ್ತೆಗೆ ಪಡುಗಿರಿ ನಾಥೋರಾಮ್ ಗೋಡ್ಸೆ ರಸ್ತೆ ಎಂದು ರಸ್ತೆ ಆರಂಭದಲ್ಲೇ ಹಾಕಲಾಗಿದೆ.

ಬೋಳ ಗ್ರಾಮ ಪಂಚಾಯತ್ ಪಡುಗಿರಿ ನಾಥೋರಾಮ್ ಗೋಡ್ಸೆ ರಸ್ತೆ ಎಂದು ಬರೆದು ಬಾಣದ ಗುರುತನ್ನೂ ಹಾಕಲಾಗಿದೆ. ಸೂಚನಾ ಫಲಕ ಸರಕಾರಿ ಫಲಕದ ಮಾದರಿಯಲ್ಲೇ ಇದ್ದು, ಫಲಕಕ್ಕೆ ಹಳದಿ ಬಣ್ಣ ಬಳಿದು ಕಪ್ಪು ಪಟ್ಟಿ ಹಾಕಲಾಗಿದೆ. ಫಲಕದಲ್ಲಿ ಗ್ರಾಮ ಪಂಚಾಯತ್ ಬೋಳ ಎಂದು ಬರೆಯಲಾಗಿದೆ.

ರಸ್ತೆಗೆ ನಾಥೂರಾಮ್ ಗೋಡ್ಸ್‌ ಹೆಸರಿಟ್ಟಿರುವುದನ್ನು ಖಂಡಿಸಿ, ಕಾಂಗ್ರೆಸ್ ಪ್ರತಿಭಟನೆಗೆ ಚಿಂತನೆ ನಡೆಸಿದೆ. ಕಾಂಗ್ರೆಸ್ ನಿಯೋಗವೊಂದು ಪಂಚಾಯತ್ ಕಚೇರಿಗೆ ತೆರಳಿ ರಸ್ತೆ ನಾಮ ಫಲಕವನ್ನು ತೆರವುಗೊಳಿಸುವಂತೆ ಈಗಾಗಲೇ ಮನವಿ ಸಲ್ಲಿಸಿದೆ.

You may also like

Leave a Comment