Home » ಸುಳ್ಯ: ಗೋದಾಮಿಗೆ ಬೆಂಕಿ ತಗುಲಿ ವೃದ್ಧ ಸಜೀವ ದಹನ!! ಸಾವಿನ ಸುತ್ತ ಹಲವು ಅನುಮಾನ-ಆತ್ಮಹತ್ಯೆ ಎನ್ನುವ ಶಂಕೆ

ಸುಳ್ಯ: ಗೋದಾಮಿಗೆ ಬೆಂಕಿ ತಗುಲಿ ವೃದ್ಧ ಸಜೀವ ದಹನ!! ಸಾವಿನ ಸುತ್ತ ಹಲವು ಅನುಮಾನ-ಆತ್ಮಹತ್ಯೆ ಎನ್ನುವ ಶಂಕೆ

0 comments

ಸುಳ್ಯ: ಗೋದಾಮೊಂದಕ್ಕೆ ಬೆಂಕಿ ತಗುಲಿ ವೃದ್ಧರೋರ್ವರು ಸಜೀವ ದಹನಗೊಂಡ ಘಟನೆಯೊಂದು ಸುಳ್ಯ ತಾಲೂಕಿನ ಮರ್ಕಂಜ ಎಂಬಲ್ಲಿ ನಡೆದಿದ್ದು, ಪ್ರಕರಣ ಅನುಮಾನಗಳನ್ನು ಹುಟ್ಟುಹಾಕಿದೆ.

ಮೃತರನ್ನು ನೂಜಾಲ ನಿವಾಸಿ ಮಹಾಲಿಂಗೇಶ್ವರ ಭಟ್ ಎಂದು ಗುರುತಿಸಲಾಗಿದೆ. ಅಡಿಕೆ ಹಾಗೂ ಇನ್ನಿತರ ಕೃಷಿ ಉತ್ಪನ್ನಗಳನ್ನು ದಾಸ್ತಾನಿರಿಸಿದ್ದ ಕಟ್ಟಡಕ್ಕೆ ಏಕಾಏಕಿ ಬೆಂಕಿ ತಗುಲಿದ್ದರಿಂದ ಘಟನೆ ನಡೆದಿದೆ ಎನ್ನಲಾಗಿದೆ.

ವೃದ್ಧ ಸಜೀವ ದಹನಗೊಂಡ ಸುದ್ದಿ ತಿಳಿದು ಸಾವಿನ ಸುತ್ತ ಅನುಮಾನಗಳು ಮೂಡಿದ್ದು, ಆತ್ಮಹತ್ಯೆ ಎನ್ನುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment