ಕರಡಿಯೊಂದು ನಗರಕ್ಕೆ ಆಗಮಿಸಿ, ಮನೆಯ ಮುಂದಿನ ಸರ್ಜದಲ್ಲಿ ಕಾಣಿಸಿಕೊಳ್ಳುವ ಮೂಲಕ ಕೆಲಕಾಲ ನಗರದಲ್ಲಿ ಆತಂಕ ಸೃಷ್ಟಿಸಿದ ಘಟನೆ ಜರುಗಿದೆ.
ಸೋಮವಾರ ಬೆಂಬೆಳಿಗ್ಗೆ ೬ ಗಂಟೆಗೆ ರಾಣಿಪೇಟೆಯ ಮನೆಯೊಂದರ ಮುಂಬಾಗಿ ಸರ್ಜದಲ್ಲಿ ಕಾಣಿಸಿಕೊಳ್ಳುವ ಮೂಲಕ ರಾಣಿಪೇಟೆಯ ಮತ್ತು ನಗರದ ನಿವಾಸಿಗಳಿಗೆ ಕೆಲ ಕಾಲ ಆತಂಕ ಸೃಷ್ಟಿಯಾಗುವಂತೆ ಮಾಡಿತು.
ತಕ್ಷಣವೇ ಕಾರ್ಯಪ್ರವೃತರಾದ ಪೊಲೀಸರು ಹಾಗೂ ಅರಣ್ಯ ಇಲಾಖಾಧಿಕಾರಿ ಹಸಸಹಾಸ ಪಟ್ಟು ಕರಡಿಯನ್ನು ಹಿಡಿಯಲು ಬಲೆ ಬಿಸಿ ಕಾದುಕುಳಿತರು, ಆದರೂ ಯಾವುದು ಸಂಬAದವೇ ಇಲ್ಲ ಎಂಬAತೆ ಸರ್ಜಾದ ಮೇಲೆ ಕುಳಿತಿದ್ದ ಕರಡಿ ನಿರಾತಂಕವಾಗಿಯೇ ಕುಳಿತಿತು. ತಾಳ್ಮೆಯಿಂದಲೇ ಕಾದ ಅರಣ್ಯ ಇಲಾಖೆಯ ಅಧಿಕಾರಿಗಳು ವಲಯ ಅರಣ್ಯಾಧಿಕಾರಿ ವಿನಯ್ ನೇತೃತ್ವದಲಿ ಕೊನೆಗೆ ಲಸಿಕೆ ಸಿಂಪಡಿಸಿ ಕರಡಿ ಬಲೆಗೆ ಬೀಳುವಂತೆ ಮಾಡಿ ಬೋನ್ನಲ್ಲಿ ಸಂಗ್ರಹಿಸಿಕೊAಡೈದರು.
ರಾಣಿಪೇಟೆಯ ಸತ್ಯನಾರಾಯಣಸಿಂಗ್ ಸಮುದಾಯಭವನದ ಹಿಂದಿನ ಮನೆಯ ಸರ್ಜಾದಲ್ಲಿ ಕಾಣಿಸಿಕೊಂಡ ಕರಡಿ ಎಲ್ಲಿಂದ ಬಂದಿದ್ದ ಹೇಗೆ ಬಂತು ಎಂಬೆಲ್ಲಾ ಚೆರ್ಚೆ ನಗರದ ರಾಣಿಪೇಟೆಯ ಹಾಗು ನಗರದಲ್ಲಿ ನಡೆದಿತು. ಒಟ್ಟಾರೆ ಕೆಲಕಾಲ ಗೊಂದಲಕ್ಕೆ ಕಾರಣವಾಗಿದ್ದ ಕರಡಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಯಾವುದೆ ತೊಂದರೆಯಾಗದAತೆ ಸುರಕ್ಷಿತವಾಗಿ ಹಿಡಿಕೊಂಡೈದಿದ್ದು ನಾಗರಿಕರು ನಿಟ್ಟೂಸಿರು ಬಿಡುವಂತಾಗಿತು.
