Home » ಅಂಗಡಿಗೆ ಹೋಗಿ ಬರುತ್ತಿದ್ದ ಬಾಲಕನಿಗೆ ಡಿಕ್ಕಿ ಹೊಡೆದ ರಣ ರಕ್ಕಸ ಲಾರಿ !! | ‘ನನ್ನ ಹೊಟ್ಟೆ ಕಟ್ಟಾಗಿದೆ’ ಎನ್ನುತ್ತಲೇ ಪ್ರಾಣ ಬಿಟ್ಟ ಬಾಲಕ

ಅಂಗಡಿಗೆ ಹೋಗಿ ಬರುತ್ತಿದ್ದ ಬಾಲಕನಿಗೆ ಡಿಕ್ಕಿ ಹೊಡೆದ ರಣ ರಕ್ಕಸ ಲಾರಿ !! | ‘ನನ್ನ ಹೊಟ್ಟೆ ಕಟ್ಟಾಗಿದೆ’ ಎನ್ನುತ್ತಲೇ ಪ್ರಾಣ ಬಿಟ್ಟ ಬಾಲಕ

0 comments

ಬೆಳಗಾವಿ : ಬಾಲಕನೊಬ್ಬ ಅಂಗಡಿಗೆ ಹೋಗಿ ಬರುವಾಗ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಲಾರಿಯ ಚಕ್ರಕ್ಕೆ ಬಾಲಕ ಸಿಲುಕಿ ಮೃತಪಟ್ಟ ಭಯಾನಕ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗೀರಗಾಂವ ಗ್ರಾಮದಲ್ಲಿ ನಡೆದಿದೆ.

ಲಾರಿ ಅತೀ ವೇಗದಲ್ಲಿದ್ದ ಪರಿಣಾಮ ಬಾಲಕ ಸಮೇತ ಲಾರಿ ಚಕ್ರ ದೂರದಲ್ಲಿದ್ದ ಚರಂಡಿಯೊಳಗೆ ಹೋಗಿ ಸಿಲುಕಿಕೊಂಡಿದೆ. ದುರದೃಷ್ಟವಶಾತ್‌ ಆ ಬಾಲಕನ ದೇಹದ ಸೊಂಟದವರೆಗಿನ ಅರ್ಧ ಭಾಗ ಹೊರಗಿದ್ರೆ, ಇನ್ನಾರ್ಧ ಭಾಗ ಚರಂಡಿ ಹಾಗೂ ಲಾರಿ ಚಕ್ರದ ನಡುವೆ ಸಿಲುಕಿತ್ತು. ಅಲ್ಲಿದ್ದ ಜನರೆಲ್ಲಾ ಬಾಲಕನ್ನು ಹೊರತೆಗೆಯಲು ಹರಸಾಹಸಪಟ್ಟಿದ್ದು, ಕೊನೆಗೆ ಜೆಸಿಬಿ ಸಹಾಯದಿಂದ ಬಾಲಕನನ್ನು ಲಾರಿಚಕ್ರ ಮತ್ತು ಚರಂಡಿ ನಡುವಿನ ಸ್ಥಳದಿಂದ ಹೊರ ತರಲಾಯಿತು.

ಇದೇ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಬಾಲಕನನ್ನು ನಿಪ್ಪಾಣಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆ ಬಾಲಕ ಇದೀಗ ಸಾವು ಕಂಡಿದ್ದಾರೆ. ಈ ಸಂಬಂಧ ಖಡಕಲಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟಾರೆ ಆ ಬಾಲಕ ನರಳಾಡುತ್ತ ಹೊಟ್ಟೆ ಕಟ್‌ ಆಗಿಬಿಟ್ಟಿದೆ ಎಂದು ಗೋಳಾಡುತ್ತಿದ್ದ ದೃಶ್ಯ ಎಲ್ಲರ ಹೃದಯವನ್ನು ಕಲ್ಲಾಗಿಸಿಬಿಟ್ಟಿದೆ.

You may also like

Leave a Comment