Home » ಮುರ್ಡೇಶ್ವರ: ಸಮುದ್ರಕ್ಕೆ ಇಳಿದ ಇಬ್ಬರು ಯುವಕರು ನೀರುಪಾಲು-ಮೂವರ ರಕ್ಷಣೆ!!

ಮುರ್ಡೇಶ್ವರ: ಸಮುದ್ರಕ್ಕೆ ಇಳಿದ ಇಬ್ಬರು ಯುವಕರು ನೀರುಪಾಲು-ಮೂವರ ರಕ್ಷಣೆ!!

0 comments

ಪ್ರವಾಸಕ್ಕೆಂದು ಬಂದಿದ್ದ ತಂಡವೊಂದು ಕಡಲ ನೀರಾಟದಲ್ಲಿ ತೊಡಗಿದ್ದ ವೇಳೆ ಇಬ್ಬರು ಯುವಕರು ನೀರುಪಾಲಾಗಿ, ಮೂವರನ್ನು ರಕ್ಷಿಸಿದ ಘಟನೆಯು ಮುರ್ಡೇಶ್ವರದಲ್ಲಿ ನಡೆದಿದೆ.

ಮೃತ ಯುವಕರನ್ನು ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಅಬ್ರಾರ್ ಶೇಕ್(21)ಹಾಗೂ ಸುಶಾಂತ್(23) ಎಂದು ಗುರುತಿಸಲಾಗಿದೆ. ಸುಮಾರು ಹನ್ನೆರಡು ಮಂದಿಯಿದ್ದ ಯುವಕರ ತಂಡವು ಪ್ರವಾಸಕ್ಕೆಂದು ಹೊರಟು ಬಂದಿದ್ದು, ಮುರ್ಡೇಶ್ವರನ ದರ್ಶನ ಪಡೆದ ಬಳಿಕ ಸಮುದ್ರದಲ್ಲಿ ಈಜಾಟಕ್ಕೆ ಇಳಿದಿದ್ದರು.

ಈ ವೇಳೆ ಐವರು ಯುವಕರು ನೀರಿನ ಸೆಳೆತಕ್ಕೆ ಸಿಲುಕಿ ಕಣ್ಮರೆಯಾಗಿದ್ದು, ಕೂಡಲೇ ರಕ್ಷಣಾ ತಂಡದ ಸಿಬ್ಬಂದಿಗಳು ಮೂವರನ್ನು ರಕ್ಷಿಸಿದ್ದು, ಇಬ್ಬರು ಯುವಕರು ಅದಾಗಲೇ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment