Home » ಮಂಗಳೂರು : 9 ನೆಯ ತರಗತಿ ವಿದ್ಯಾರ್ಥಿ ಹಾಸ್ಟೆಲ್ ನಲ್ಲಿ ನೇಣಿಗೆ ಶರಣು!

ಮಂಗಳೂರು : 9 ನೆಯ ತರಗತಿ ವಿದ್ಯಾರ್ಥಿ ಹಾಸ್ಟೆಲ್ ನಲ್ಲಿ ನೇಣಿಗೆ ಶರಣು!

0 comments

ತನ್ನ ಅಮ್ಮನ ಜನ್ಮದಿನಕ್ಕೆ ಶುಭಾಶಯ ತಿಳಿಸಲು ಹಾಸ್ಟೆಲ್ ವಾರ್ಡನ್ ಮೊಬೈಲ್ ನೀಡದ್ದಕ್ಕೆ ಮನನೊಂದು ವಿಧ್ಯಾರ್ಥಿಯೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಳ್ಳಾಲ ಮಂಗಳೂರಿನ ಖಾಸಗಿ ಶಾಲೆಯಲ್ಲಿ ನಡೆದಿದೆ.

ಮೃತ ಬಾಲಕನನ್ನು 14 ವರ್ಷ ಪ್ರಾಯದ ಬೆಂಗಳೂರು ಹೊಸಕೋಟೆ ಮೂಲದ ಪೂರ್ವಜ್ ಎಂದು ಗುರುತಿಸಲಾಗಿದೆ. ಈತ ಶಾರದಾ ವಿದ್ಯಾನಿಕೇತನದಲ್ಲಿ 9ನೇ ತರಗತಿ ಕಲಿಯುತ್ತಿದ್ದ ಎಂದು ತಿಳಿದು ಬಂದಿದೆ.

ನಿನ್ನೆ ಜೂನ್ 11 ರಂದು ತನ್ನ ತಾಯಿ ಹುಟ್ಟುಹಬ್ಬದ ಹಿನ್ನಲೆ ತಾಯಿಗೆ ಕರೆ ಮಾಡಿ ಶುಭಾಷಯ ಹೇಳಲು ಹಾಸ್ಟೆಲ್ ವಾರ್ಡನ್ ಗೆ ಮೊಬೈಲ್ ಕೇಳಿದ್ದಾನೆ. ಆದರೆ ವಾರ್ಡನ್ ಮೊಬೈಲ್ ನೀಡಲು ನಿರಾಕರಿಸಿದ್ದಾರೆ. ಅಲ್ಲದೆ ಮನೆಯವರು ಕರೆ ಮಾಡಿದ ಸಂದರ್ಭದಲ್ಲೂ ಕೂಡ ಬಾಲಕನಿಗೆ ಕರೆ ನೀಡಿಲ್ಲ ಎಂದು ಆರೋಪಿಸಲಾಗಿದೆ. ಇದರಿಂದ ಮನನೊಂದ ಬಾಲಕ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮನೆಯವರು ಆರೋಪಿಸಿದ್ದಾರೆ.

ಅಲ್ಲದೆ ಈ ಬಾಲಕ ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿದ್ದು, ಅದರಲ್ಲಿ ಅಮ್ಮನಿಗೆ ಹುಟ್ಟುಹಬ್ಬದ ಶುಭಾಷಯಗಳು. ಎಲ್ಲರೂ ಖುಷಿಯಾಗಿರಿ, ಶಾಲೆಯಲ್ಲಿ ತನಗಾಗಿ ಕಟ್ಟಿರುವ ಶುಲ್ಕವನ್ನು ವಾಪಸ್ಸು ಪಡೆದುಕೊಳ್ಳಿ. ನಿಮ್ಮಿಂದ ನಾನು ದೂರವಾಗುತ್ತಿದ್ದೇನೆ. ಯಾರೂ ಅಳಬೇಡಿ, ಎಂದು ಡೆತ್‌ ನೋಟಲ್ಲಿ ಬರೆದಿಟ್ಟು ಹುಡುಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

You may also like

Leave a Comment