Home » “ಮುಸ್ಲಿಂ” ಹುಡುಗನ ಎದೆಯಲ್ಲಿ ರಾರಾಜಿಸುತ್ತಿರುವ ಯೋಗಿ ಆದಿತ್ಯನಾಥ್ ಟ್ಯಾಟೂ!

“ಮುಸ್ಲಿಂ” ಹುಡುಗನ ಎದೆಯಲ್ಲಿ ರಾರಾಜಿಸುತ್ತಿರುವ ಯೋಗಿ ಆದಿತ್ಯನಾಥ್ ಟ್ಯಾಟೂ!

0 comments

ಸಿನಿಮಾ ನಟ, ನಟಿಯರು, ಕ್ರೀಡಾಪಟುಗಳು, ಹಾಲಿವುಡ್ ತಾರೆಯರ ಮೇಲೆ ಇರುವ ಜನರ ಅಭಿಮಾನ ತುಂಬಾ ನೋಡಿರಬಹುದು. ಆದರೆ, ರಾಜಕಾರಣದಲ್ಲಿ ಅಂಥ ಅಭಿಮಾನ ಕಾಣಸಿಗುವುದು ಬಹಳ ಅಪರೂಪ. ಅದರಲ್ಲೂ ಉತ್ತರ ಭಾರತದಲ್ಲಿ ಇಂಥ ಕ್ರೇಜ್ ಬಹಳ ಕಡಿಮೆ.

ಆದರೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಯೊಬ್ಬ ತನ್ನ ದೇಹದ ಮೇಲೆ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಗಿಫ್ಟ್ ನೀಡಿದ್ದಾನೆ.

ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಈ ಅಭಿಮಾನಿ ಉಳಿದ ಅಭಿಮಾನಿಗಳಿಗಿಂತ ಭಿನ್ನ ಅಂತಾನೇ ಹೇಳಬಹುದು. ಈ ವ್ಯಕ್ತಿಯ ಹೆಸರು ಯಮೀನ್ ಸಿದ್ದಿಕಿ. 23 ವರ್ಷದ ಯಮೀನ್ ಯೋಗಿಯನ್ನು ತನ್ನ ರೋಲ್ ಮಾಡೆಲ್ ಎಂದು ಪರಿಗಣಿಸಿದ್ದಾನೆ. ಫರೂಕಾಬಾದ್ ಮತ್ತು ಮೈನ್‌ಪುರಿ ಜಿಲ್ಲೆಯ ಗಡಿಯಲ್ಲಿರುವ ತೆಹಸಿಲ್ ಅಲಿಗಂಜ್‌ನ ಸರಾಯ್ ಆಗಟ್ ನಲ್ಲಿ ಮನೆ ಇದೆ. ಚಪ್ಪಲಿಯ ವ್ಯಾಪಾರವನ್ನು ಮಾಡಿಕೊಂಡಿದ್ದಾನೆ ಈ ಯುವಕ.

ಮುಖ್ಯಮಂತ್ರಿಯ ಮೇಲಿನ ಅಭಿಮಾನ ಎಷ್ಟರಮಟ್ಟಿಗೆ ಇದೆ ಅಂದರೆ,ಬಯೋಗಿ ಅವರ ಹುಟ್ಟುಹಬ್ಬದಂದು (ಜೂನ್ 5) ಅವರು ವಿಶೇಷ ಉಡುಗೊರೆಯನ್ನು ನೀಡಲು ತಮ್ಮ ಎದೆಯ ಮೇಲೆ ಯೋಗಿ ಆದಿತ್ಯನಾಥ್ ಅವರ ಹಚ್ಚೆ ಹಾಕಿಸಿಕೊಂಡಿದ್ದಾರೆ.

ಯಮೀನ್ ಇನ್ನೂ ಯುಪಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿಲ್ಲ. ಆದರೆ ಭವಿಷ್ಯದಲ್ಲಿ ಯಮೀನ್ ಯೋಗಿಯನ್ನು ಭೇಟಿಯಾಗಿ ತಾವು ಹಾಕಿಸಿಕೊಂಡಿರುವ ಹಚ್ಚೆಯನ್ನು ತೋರಿಸಲು ಬಯಸಿದ್ದಾರೆ.

ಯಮೀನ್ ಎದೆಯ ಮೇಲೆ ಹಾಕಿಸಿಕೊಂಡಿರುವುದು, ಅವರ ಮುಸ್ಲಿಂ ಸ್ನೇಹಿತರಿಗೆ ಇಷ್ಟವಿಲ್ಲ. ಬಹುತೇಕ ಸ್ನೇಹಿತರು ಈ ಕುರಿತಾಗಿ ಅವರನ್ನು ಟೀಕೆ ಮಾಡಿದ್ದು ಮಾತ್ರವಲ್ಲ ಯಮೀನ್ ರನ್ನು ಯಾವುದೇ ಕಾರ್ಯಕ್ರಮದಲ್ಲೂ ಸೇರಿಸುತ್ತಿಲ್ಲವಂತೆ. ಯಮೀನ್ ಪ್ರಕಾರ, ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ ರಚನೆಯಾದಾಗಿನಿಂದ, ರಾಜ್ಯದ ಚಿತ್ರಣವೇ ಬದಲಾಗಿದೆ. ಯೋಗಿ ಸರ್ಕಾರದ ಯೋಜನೆ ಎಲ್ಲಾ ಬಡವರಿಗೆ ಒಂದೇ. ಹಿಂದೂ, ಮುಸ್ಲಿಂ, ದಲಿತ ಎಂದು ತಾರತಮ್ಯ ಮಾಡಿಲ್ಲ. ಹಿಂದೂ ಅಥವಾ ಮುಸಲ್ಮಾನರಿರಲಿ ಎಲ್ಲರಿಗೂ ಸಮಾನವಾಗಿ ಯೋಜನೆಗಳ ಲಾಭ ದೊರೆಯುತ್ತಿದೆ ಎಂದು ಹೇಳಿದ್ದಾನೆ.

You may also like

Leave a Comment