Home » 3 ತಿಂಗಳ ಹಿಂದೆ ಮದುವೆಯಾಗಿದ್ದ ಡಾಕ್ಟರ್ 11 ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ | ಅಂಥಾದ್ದೇನಾಗಿತ್ತು?

3 ತಿಂಗಳ ಹಿಂದೆ ಮದುವೆಯಾಗಿದ್ದ ಡಾಕ್ಟರ್ 11 ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ | ಅಂಥಾದ್ದೇನಾಗಿತ್ತು?

0 comments

ಬೆಂಗಳೂರು: ಬೆಂಗಳೂರಿನಲ್ಲಿ 11ನೇ ಮಹಡಿಯಿಂದ ಜಿಗಿದು ವೈದ್ಯರೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಡೆದಿದೆ. ಮುಂಜಾನೆ 5ರ ಸುಮಾರಿಗೆ ಗೋದ್ರೇಜ್ ಅಪಾರ್ಟ್ಮೆಂಟ್ ನಿಂದ ಕೆಳಗೆ ಹಾರಿ ಡಾ.ಪೃಥ್ವಿರಾಜ್ ರೆಡ್ಡಿ(31) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೂರು ತಿಂಗಳ ಹಿಂದಷ್ಟೇ ಇವರು ವೈದ್ಯೆಯೊಬ್ಬರ ಜೊತೆ ಮದುವೆ ಆಗಿದ್ದರು. ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗೋದ್ರೇಜ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು.

ಬುಧವಾರ ಬೆಳಗಿನ ಜಾವ ಅಪಾರ್ಟ್‌ಮೆಂಟ್‌ನ 11ನೇ ಮಹಡಿ ಮೇಲಿನಿಂದ ಕೆಳಕ್ಕೆ ಜಿಗಿದು ಡಾ. ಪೃಥ್ವಿರಾಜ ರೆಡ್ಡಿ ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ಕಾರಣ ಏನೆಂದು ಗೊತ್ತಾಗಿಲ್ಲ. ವೈದ್ಯನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಆಂಧ್ರದಿಂದ ಬೆಂಗಳೂರಿಗೆ ಆಗಮಿಸಿದ್ದಾರೆ.

ಸ್ಥಳಕ್ಕೆ ಅಮೃತಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೃದ್ರೋಗದಿಂದ ಬಳಲುತ್ತಿದ್ದ ಡಾ.ಪೃಥ್ವಿರಾಜ್ ಇದೇ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

You may also like

Leave a Comment