Home » ಕಲಘಗಿಯಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡಗಳ ಬೆಳೆದಿದ್ದ ಆರೋಪಿ ವಿರುದ್ಧ ಪ್ರಕರಣ.

ಕಲಘಗಿಯಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡಗಳ ಬೆಳೆದಿದ್ದ ಆರೋಪಿ ವಿರುದ್ಧ ಪ್ರಕರಣ.

0 comments

ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದಿಂದ ಶಿಂಗನಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿರುವ ಮಾರುತಿ ಗಂಗಪ್ಪ ಕಿಳ್ಳಿಕ್ಯಾತರಗೆ ಸೇರಿದ ಜಮೀನಿನಲ್ಲಿ ಅಕ್ರಮವಾಗಿ ಬೆಳೆಸಿದ್ದ 5.5 ಅಡಿ ಯಿಂದ 8 ಅಡಿ ಎತ್ತರದ 4 ಹಸಿ ಗಾಂಜಾ ಗಿಡಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಗಿದೆ. ಮಾರುತಿ ಗಂಗಪ್ಪ ಕಿಳ್ಳಿಕ್ಯಾತರನನ್ನು ಪತ್ತೆ ಹಚ್ಚಿ ಬಂಧಿಸಬೇಕಾಗಿದ್ದು, ಆತನ ವಿರುದ್ಧ ಕಲಘಟಗಿ ವಲಯದ ಅಬಕಾರಿ ನಿರೀಕ್ಷಕ ಅಮೀತ ಬೆಳ್ಳುಬ್ಬಿ ಅವರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ವಶಪಡಿಸಿಕೊಂಡ ಹಸಿ ಗಾಂಜಾ ಮೌಲ್ಯ ರೂ.15,500 ಗಳಾಗುತ್ತದೆ ಎಂದು ಅಂದಾಜಿಸಲಾಗಿದೆ.

ಬೆಳಗಾವಿ ಕೇಂದ್ರಸ್ಥಾನದ ಅಬಕಾರಿ ಅಪರ ಆಯುಕ್ತ ಡಾ.ವೈ ಮಂಜುನಾಥ, ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತ ಫಿರೋಜ ಕಿಲ್ಲೆದಾರ ಹಾಗೂ ಧಾರವಾಡ ಜಿಲ್ಲೆಯ ಡೆಪ್ಯೂಟಿ ಕಮೀಶನರ್ ಆಫ್ ಎಕ್ಸೈಸ್ ಆಗಿರುವ ಕೆ.ಪ್ರಶಾಂತಕುಮಾರ ಮಾರ್ಗದರ್ಶನದಲ್ಲಿ ಹಾಗೂ ಧಾರವಾಡ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕ ಅಮೀತ ಬೆಳ್ಳುಬ್ಬಿ, ಅಬಕಾರಿ ಉಪ ನಿರೀಕ್ಷಕ ಮಹೇಶ ಪಾಟೀಲ, ಪೇದೆಗಳಾದ ವಿಶಾಲ ಪಾಟೀಲ್ ಮತ್ತು ಆನಂದ ಮಿರಿಯಾಲ್ ಪಿಚ್ಚಯ್ಯ ಹಾಗೂ ಹಿರಿಯ ವಾಹನ ಚಾಲಕ ಎಸ್.ಹೆಚ್.ಕಟ್ಟಿಮನಿ ಹಾಗೂ ಧಾರವಾಡ ಉಪ ವಿಭಾಗದ ಸಿಬ್ಬಂದಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.

You may also like

Leave a Comment