Home » ಮದುವೆಯಾಗಲು ಹುಡುಗಿ ಕೊಡುವವರೆಲ್ಲ ಸರ್ಕಾರಿ ನೌಕರಿಯೇ ಬೇಕೆಂದರು. ಬೇಸತ್ತ ಯುವಕ ಮಾಡಿದ್ದೇನು ಗೊತ್ತಾ!?

ಮದುವೆಯಾಗಲು ಹುಡುಗಿ ಕೊಡುವವರೆಲ್ಲ ಸರ್ಕಾರಿ ನೌಕರಿಯೇ ಬೇಕೆಂದರು. ಬೇಸತ್ತ ಯುವಕ ಮಾಡಿದ್ದೇನು ಗೊತ್ತಾ!?

0 comments

ಮದುವೆಯಾಗಲು ಹೆಣ್ಣು ಕೊಡುವವರು ಸರ್ಕಾರಿ ನೌಕರಿಗೆ ಪಟ್ಟು ಹಿಡಿದಿದ್ದರಿಂದ ಬೇಸತ್ತು ಯುವಕನೋರ್ವ ಮನೆ ತೊರೆದ ಘಟನೆ ಚಾಮರಾಜನಗರದಲ್ಲಿ ಬೆಳಕಿಗೆ ಬಂದಿದೆ.

ಮದುವೆಯಾಗಲು ಹೆಣ್ಣು ಕೊಡುವವರು ಸರ್ಕಾರಿ ನೌಕರಿಗೆ ಪಟ್ಟು ಹಿಡಿದಿದ್ದರಿಂದ ಬೇಸತ್ತು ಯುವಕನೋರ್ವ ಮನೆ ತೊರೆದಿರುವ ಘಟನೆ ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಅಭಿಷೇಕ್(29) ಎಂಬಾತನೇ ನಾಪತ್ತೆಯಾಗಿರುವ ಯುವಕನಾಗಿದ್ದಾನೆ.

ಮನೆಯವರು ಅಭಿಷೇಕ್‌ಗೆ ಮದುವೆ ಮಾಡಲು ಹೆಣ್ಣು ಹುಡುಕುತ್ತಿದ್ದು, ಎಲ್ಲೇ ಹೋದರೂ ಸರ್ಕಾರಿ ನೌಕರಿ ಇರುವವನೇ ಬೇಕೆಂದು ಹುಡುಗಿ ಮನೆಯವರು ಬೇಡಿಕೆ ಇಡುತ್ತಿದ್ದರಂತೆ. ಒಂದಲ್ಲ, ಎರಡಲ್ಲ ಹತ್ತಾರು ಹುಡುಗಿ ಮನೆಯವರು ಸರ್ಕಾರಿ ನೌಕರಿ ಇರುವ ಹುಡುಗನಿಗೇ ಪಟ್ಟು ಹಿಡಿದಿದ್ದರಿಂದ ಅಭಿಷೇಕ್ ಮನನೊಂದು ಮನೆ ತೊರೆದಿದ್ದಾನೆ ಎನ್ನಲಾಗುತ್ತಿದೆ.

ಕಳೆದ 16ರಂದು ಅಭಿಷೇಕ್ ಮನೆಯಿಂದ ಕಾಣೆಯಾಗಿದ್ದು, ಸಂಬಂಧಿಕರು, ಸ್ನೇಹಿತರ ಮನೆಯಲ್ಲಿ ಹುಡುಕಾಡಿದರೂ ಸಿಗದಿದ್ದರಿಂದ ಪಾಲಕರು ಕುದೇರು ಪೊಲೀಸ್ ಠಾಣೆಗೆ ಹುಡುಕಿಕೊಡುವಂತೆ ದೂರು ಕೊಟ್ಟಿದ್ದಾರೆ. ಈ ಸಂಬಂಧ ಕುದೇರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ

You may also like

Leave a Comment