Home » ಅಂಗನವಾಡಿಯಲ್ಲಿ ಉದ್ಯೋಗ, ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ, ಒಟ್ಟು 112 ಹುದ್ದೆಗಳು!

ಅಂಗನವಾಡಿಯಲ್ಲಿ ಉದ್ಯೋಗ, ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ, ಒಟ್ಟು 112 ಹುದ್ದೆಗಳು!

by Mallika
0 comments

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಚಿತ್ರದುರ್ಗಾ ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಚಿತ್ರದುರ್ಗಾ ಜಿಲ್ಲಾ ವ್ಯಾಪ್ತಿಯ 07 ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ 16 ಅಂಗನವಾಡಿ ಕಾರ್ಯಕರ್ತೆ ಹಾಗೂ 96 ಅಂಗನವಾಡಿ ಸಹಾಯಕಿಯರ ಗೌರವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 18-06-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 18-07-2022

ಹುದ್ದೆಗಳ ವಿವರ ಮತ್ತು ಸಂಖ್ಯೆ :
ಅಂಗನವಾಡಿ ಕಾರ್ಯಕರ್ತೆ : 16
ಅಂಗನವಾಡಿ ಸಹಾಯಕಿಯರು : 96
ಒಟ್ಟು ಹುದ್ದೆಗಳು :- 112

ಉದ್ಯೋಗ ಸ್ಥಳ : ಹುದ್ದೆಗಳಿಗೆ
ಆಯ್ಕೆಯಾದ ಅಭ್ಯರ್ಥಿಗಳು ಚಿತ್ರದುರ್ಗ ಜಿಲ್ಲೆಯಲ್ಲಿ ಕೆಲಸನಿರ್ವಹಿಸಬೇಕು.

ವಯೋಮಿತಿ : ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಟ 18ವರ್ಷ ಹಾಗೂ ಗರಿಷ್ಠ 35 ವರ್ಷ
ಒಬಿಸಿ ಕನಿಷ್ಠ 18ವರ್ಷ ಗರಿಷ್ಠ 38 ವರ್ಷ
ಎಸ್.ಸಿ-ಎಸ್.ಟಿ & ಪ್ರವರ್ಗ – 1 ಅಭ್ಯರ್ಥಿಗಳಿಗೆ ಕನಿಷ್ಠ 18 ಹಾಗೂ ಗರಿಷ್ಠ 40 ವರ್ಷ.

ಅಂಗನವಾಡಿ ಕಾರ್ಯಕರ್ತೆ:- 10ನೇ ತರಗತಿ ಪಾಸ್ ಆಗಿರಬೇಕು.ಹಚ್ಚಿನ ವಿದ್ಯಾರ್ಹತೆಯನ್ನು ಆಯ್ಕೆಗೆ ಪರಿಗಣಿಸುವಂತಿಲ್ಲ.

ಅಂಗನವಾಡಿ ಸಹಾಯಕಿಯರು :- ಕನಿಷ್ಠ 4ನೇ ತರಗತಿ ತೇರ್ಗಡೆ ಗರಿಷ್ಠ 9 ನೇ ತರಗತಿ ತೇರ್ಗಡೆ. ಯಾವುದೇ ಹುದ್ದೆಗಳಿಗೆ 10 ನೇ ತರಗತಿ ನಂತರ ಹೆಚ್ಚಿನ ಶಿಕ್ಷಣ ಪಡೆದವರು ಅರ್ಜಿ ಸಲ್ಲಿಸಲು ಅವಕಾಶ ಇಲ್ಲ.

ಅರ್ಜಿ ಶುಲ್ಕ : ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

ಆಯ್ಕೆ ಪ್ರಕ್ರಿಯೆ : ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳು ಮತ್ತು ಮೀಸಲಾತಿ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುವುದು.

ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು
4-10ನೇ ತರಗತಿ ಅಂಕಪಟ್ಟಿ, ಅರ್ಹತಾ ಪ್ರಮಾಣ ಪತ್ರ,
ಆಧಾರ ಕಾರ್ಡ್, ಜಾತಿ ಪ್ರಮಾಣ ಪತ್ರ (ಲಭ್ಯವಿದ್ದಲ್ಲಿ)
, ಪೋಟೋ ಮತ್ತು ಸಹಿ, ಇಮೇಲ್-ಐಡಿ ಮತ್ತು ಮೊಬೈಲ್ ನಂಬರ್, ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

You may also like

Leave a Comment