Home » ಗಂಡ ಮರಣಹೊಂದಿದ 2 ವರ್ಷದ ನಂತರ ಆತನ ಮಗುವಿಗೆ ಜನ್ಮ ನೀಡಿದ ಮಹಿಳೆ!

ಗಂಡ ಮರಣಹೊಂದಿದ 2 ವರ್ಷದ ನಂತರ ಆತನ ಮಗುವಿಗೆ ಜನ್ಮ ನೀಡಿದ ಮಹಿಳೆ!

0 comments

ಪ್ರಪಂಚದಲ್ಲಿ ಹಲವಾರು ರೀತಿಯ ವಿಸ್ಮಯಗಳು ನಡೆಯುತ್ತಿರುತ್ತವೆ. ಕೆಲವನ್ನು ನಂಬಲು ಅಸಾಧ್ಯವಾದರೂ ನಂಬಲೇಬೇಕಾದ ಅನಿವಾರ್ಯ ಸೃಷ್ಟಿಯಾಗಿಬಿಡುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ ಇಲ್ಲೊಬ್ಬಳು ಮಹಿಳೆ ತನ್ನ ಗಂಡ ಸಾವನ್ನಪ್ಪಿ ಸುಮಾರು 2 ವರ್ಷಗಳ ನಂತರ ಆತನ ಮಗುವಿಗೆ ಜನ್ಮ ನೀಡಿದ್ದಾಳೆ! ಇದು ಹೇಗೆ ಸಾಧ್ಯ? ನಿಜಕ್ಕೂ ಈ ವಿಷಯ ಎಲ್ಲರಿಗೂ ಆಶ್ಚರ್ಯ ಉಂಟು ಮಾಡುತ್ತದೆ. ಆಕೆ ಸಾವನ್ನಪ್ಪಿದ ವ್ಯಕ್ತಿಯಿಂದ ಮಗು ಪಡೆದಿದ್ದು ಹೇಗೆ? ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

ಲಾರೆನ್ ಮೆಕೈಗರ್ ಎಂಬ ಮಹಿಳೆಯ ಪತಿ ಕ್ರಿಸ್ 2020ರ ಜುಲೈ ತಿಂಗಳಲ್ಲಿ ಟರ್ಮಿನಲ್ ಬ್ರೈನ್ ಟ್ಯೂಮರ್‌ನಿಂದ ಸಾವನ್ನಪ್ಪಿದ್ದರು. ಅವರಿಬ್ಬರೂ ತಮಗೊಂದು ಮಗು ಬೇಕೆಂದು ಮದುವೆಯಾದಾಗಿನಿಂದಲೂ ಕನಸು ಕಂಡಿದ್ದರು. ಆದರೆ, ಕ್ರಿಸ್‌ಗೆ ಬೈನ್ ಟ್ಯೂಮರ್ ಇರುವುದು ಗೊತ್ತಾದ ನಂತರ ಆತನ ಚಿಕಿತ್ಸೆಯ ಬಗ್ಗೆ ಹೆಚ್ಚು ಗಮನಹರಿಸಬೇಕಾಯಿತು. ಆತ ಗುಣವಾದ ನಂತರ ಮಗುವಿನ ಬಗ್ಗೆ ಯೋಚನೆ ಮಾಡಿದರಾಯಿತು ಎಂದುಕೊಂಡಿದ್ದ ಲಾರೆನ್‌ಗೆ ಕ್ರಿಸ್‌ನ ಸಾವು ಭಾರೀ ದೊಡ್ಡ ಆಘಾತವನ್ನು ನೀಡಿತ್ತು.

ಇದೀಗ ಕ್ರಿಸ್ ಸಾವನ್ನಪ್ಪಿ ಸುಮಾರು ಎರಡು ವರ್ಷಗಳ ನಂತರ ಲಾರೆನ್ ಆತನ ಮಗುವಿಗೆ ಜನ್ಮ ನೀಡಿದ್ದಾಳೆ! 2020ರ ಜುಲೈ ತಿಂಗಳಲ್ಲಿ ಸಾವನ್ನಪ್ಪಿದ್ದ ಕ್ರಿಸ್‌ನ ವೀರ್ಯವನ್ನು ಹೆಪ್ಪುಗಟ್ಟಿಸಿ, ಶೇಖರಿಸಿಟ್ಟಿದ್ದ ಲಾರೆನ್ ಆ ವೀರ್ಯವನ್ನು ಬಳಸಿಕೊಂಡು ಗರ್ಭಿಣಿಯಾಗಿದ್ದಾಳೆ. ಹೌದು. ನಿಜ. ಇದೀಗ ಆಕೆ ಮುದ್ದಾದ ಮಗುವನ್ನು ಹೆತ್ತಿದ್ದಾಳೆ‌. ಈ ಮೂಲಕ ತನ್ನ ಮತ್ತು ಕ್ರಿಸ್‌ನ ಪ್ರೀತಿಯ ಸಂಕೇತವಾದ ಮಗುವನ್ನು ಪಡೆಯುವ ಆಕೆಯ
ಕನಸು ನನಸಾಗಿದೆ.

33 ವರ್ಷದ ಲಾರೆನ್ ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ತನ್ನ ಮೃತಪಟ್ಟ ಗಂಡನ ಮಗುವಿಗೆ ಜನ್ಮ ನೀಡಿದ್ದಾಳೆ. ಐವಿಎಫ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ಆಕೆ ತನ್ನ ಗಂಡ ಸಾವನ್ನಪ್ಪಿ 9 ತಿಂಗಳಾಗುವವರೆಗೂ ಕಾದಿದ್ದರು. ಗಂಡನ ಸಾವಿನ 9 ತಿಂಗಳ ನಂತರ ಐವಿಎಫ್ ಮೂಲಕ ತನ್ನ ಗಂಡನ ವೀರ್ಯವನ್ನು ಬಳಸಿಕೊಂಡು ಲಾರೆನ್ ಗರ್ಭ ಧರಿಸಲು ನಿರ್ಧಾರ ಮಾಡಿದ್ದಾಳೆ.

ಇದೀಗ ಮೇ 17ರಂದು ಲಾರೆನ್ ತನ್ನ ಮಗ ಸೆಬ್‌ಗೆ ಜನ್ಮ ನೀಡಿದ್ದಾಳೆ. ಕ್ರಿಸ್ ಮತ್ತೆ ನಮ್ಮ ಮಗನ ರೂಪದಲ್ಲಿ ಹುಟ್ಟಿ ಬಂದಿದ್ದಾನೆ ಎಂಬುದರಲ್ಲಿ ನನಗೆ ಯಾವ ಅನುಮಾನವೂ ಇಲ್ಲ ಎಂದು ಲಾರೆನ್ ಹೇಳಿದ್ದಾಳೆ. ಈಗ ಲಾರೆನ್ ಗಂಡ ಕಳೆದುಕೊಂಡ ನೋವಿನ ದುಃಖ ಮಗುವಿನ ಆಗಮನದ ಮೂಲಕ ಕಡಿಮೆಯಾಗಿರುವುದಂತೂ ನಿಜ.

You may also like

Leave a Comment