Home » ಟೈಲರ್ ಶಿರಚ್ಛೇದನ ಸಣ್ಣ ವಿಷಯ, ಇದರಲ್ಲೂ ಬಿಜೆಪಿ ಪಾಕಿಸ್ತಾನದ ಕೈವಾಡ ಹುಡುಕಲು ಹೊರಟಿದೆ : ರೈತ ನಾಯಕ ಅನ್ನಿಸಿಕೊಂಡ ರಾಕೇಶ್ ಟಿಕಾಯತ್

ಟೈಲರ್ ಶಿರಚ್ಛೇದನ ಸಣ್ಣ ವಿಷಯ, ಇದರಲ್ಲೂ ಬಿಜೆಪಿ ಪಾಕಿಸ್ತಾನದ ಕೈವಾಡ ಹುಡುಕಲು ಹೊರಟಿದೆ : ರೈತ ನಾಯಕ ಅನ್ನಿಸಿಕೊಂಡ ರಾಕೇಶ್ ಟಿಕಾಯತ್

0 comments

ನವದೆಹಲಿ: ಮೊನ್ನೆ ಉದಯ್‍ಪುರದಲ್ಲಿ ನಡೆದ ಟೈಲರ್ ಶಿರಚ್ಛೇದನ ಸಣ್ಣ ವಿಷಯವಾಗಿದೆ. ಇದರಲ್ಲಿ ಬಿಜೆಪಿ ಪಾಕಿಸ್ತಾನದ ಕೈವಾಡ ಹುಡುಕಲು ಹೊರಟಿದೆ ಎನ್ನುವ ಮೂಲಕ ಹತ್ಯೆಯನ್ನು ಸೋಕಾಲ್ಡ್ ರೈತ ನಾಯಕ ರಾಕೇಶ್ ಟಿಕಾಯತ್ ಸಮರ್ಥಿಸಿಕೊಂಡಿದ್ದಾರೆ.

ಈ ರೀತಿಯ ಘಟನೆಗಳು ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳಲ್ಲಿ ಮಾತ್ರ ಏಕೆ ನಡೆಯುತ್ತವೆ. ಹೀಗೆ ಏನಾದರೂ ಸಣ್ಣ ಘಟನೆ ಸಂಭವಿಸಿದರೂ ಬಿಜೆಪಿ ಪಾಕಿಸ್ತಾನದ ಕೈವಾಡವನ್ನು ಹುಡುಕಲು ಹೋಗುತ್ತದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಿಡಿಕಾರಿದರು.

ರಾಜಸ್ಥಾನ ಅಥವಾ ಪಂಜಾಬ್ ರಾಜ್ಯಗಳಲ್ಲಿ ಈ ರೀತಿ ಘಟನೆಗಳು ಹೆಚ್ಚುತ್ತಿವೆ. ಕೇಂದ್ರದಲ್ಲಿ ಇರುವವರು ಇದೆಲ್ಲವನ್ನು ಮಾಡಿಸುತ್ತಿರಬಹುದು ಎಂದು ಅವರು ಅನುಮಾನ ವ್ಯಕ್ತಪಡಿಸಿದರು. ಎಲ್ಲಿ ಏನಾದರೂ ಚಿಕ್ಕ ಘಟನೆ ನಡೆದರೂ ಪಾಕಿಸ್ತಾನ ಭಾಗಿಯಾಗಿದೆ ಎಂದು ಬಿಜೆಪಿ ಹೇಳುತ್ತದೆ.

ಭಾರತದಲ್ಲಿ ಸಂವಿಧಾನ, ಕಾನೂನು ಮತ್ತು ಹಲವು ಸೆಕ್ಷನ್‍ಗಳಿವೆ. ಆದರೆ ಅವೆಲ್ಲವೂ ಏನು ಮಾಡುತ್ತಿವೆ ? ಇಲ್ಲಿ ನೋಡುವ ಬದಲು ಪಾಕಿಸ್ತಾನವನ್ನು ಗುರಿಯಾಗಿಸುತ್ತಿದ್ದಾರೆ. ಇದರಲ್ಲಿ ಪಾಕಿಸ್ತಾನದವರು ಏನು ಮಾಡಿದ್ದಾರೆ. ಈ ಕೊಲೆ ಮಾಡಿದವರನ್ನು ಕಾನೂನಿನ ನಿಯಮಾನುಸಾರ ಬಂಧಿಸಿ ಎಂದರು.
ಈಗಾಗಲೇ ಉದಯಪುರದ ಟೈಲರ್ ಹತ್ಯೆಗೆ ಸಂಬಂಧಿಸಿ ಕೇಂದ್ರೀಯ ತನಿಖಾ ದಳ ತನಿಖೆ ಆರಂಭಿಸಿದ್ದು, ಪಾಕಿಸ್ತಾನದ ನಂಟಿರುವುದು ಕಂಡುಬಂದಿದೆ. ಇಬ್ಬರು ಆರೋಪಿಗಳಲ್ಲಿ ಒಬ್ಬರಾದ ಗೌಸ್ ಮೊಹಮ್ಮದ್ 2014ರಲ್ಲಿ 45 ದಿನಗಳ ತರಬೇತಿಗಾಗಿ ಕರಾಚಿಗೆ ಹೋಗಿದ್ದ ಎಂದು ತನಿಖಾ ಸಂಸ್ಥೆಗಳು ಹೇಳಿವೆ. ದೇಶಕ್ಕೆ ದೇಶವೇ, ಮುಸ್ಲಿಂ ಸಮುದಾಯದವರು ಕೂಡಾ ಕನ್ನಯ್ಯ ಲಾಲ್ ಅವರ ಸಾವಿಗೆ ಮರುಗುತ್ತಿರುವಾಗ, ರೈತ ನಾಯಕ ಎನಿಸಿಕೊಂಡ ಈ ರಾಕೇಶ್ ಟಿಕಾಯತ್ ಇದೊಂದು ಸಣ್ಣ ವಿಷಯ ಎಂದು ಹತ್ಯೆಯನ್ನು ಪರೋಕ್ಷವಾಗಿ ಸಮರ್ಥಿಸಿದ ರೀತಿ ಖೇದಕರ ಅನ್ನಿಸಿದೆ.

You may also like

Leave a Comment