Home » ಮರವಂತೆ : ಹೆದ್ದಾರಿಯಿಂದ ಸಮುದ್ರಕ್ಕೆ ಕಾರು ಉರುಳಿ ಇಬ್ಬರು ನೀರು ಪಾಲು 

ಮರವಂತೆ : ಹೆದ್ದಾರಿಯಿಂದ ಸಮುದ್ರಕ್ಕೆ ಕಾರು ಉರುಳಿ ಇಬ್ಬರು ನೀರು ಪಾಲು 

by Mallika
0 comments

ಕುಂದಾಪುರ : ಮರವಂತೆಯ ಮಾರಸ್ವಾಮಿ ದೇವಸ್ಥಾನದ ಬಳಿ ಹೆದ್ದಾರಿಯಿಂದ ಕಾರೊಂದು ಸಮುದ್ರಕ್ಕೆ ಬಿದ್ದು ಸಾವು ಸಂಭವಿಸಿದ ಘಟನೆಯೊಂದು ಶನಿವಾರ ತಡರಾತ್ರಿ ಸಂಭವಿಸಿದೆ. ಕರಾವಳಿ ಭಾಗದಲ್ಲಿ ಧಾರಕಾರ ಸುರಿಯುತ್ತಿರುವ ಮಳೆಯಿಂದ ಸಮುದ್ರ ರಾತ್ರಿ ವೇಳೆ ಪ್ರಕ್ಷುಬ್ಧವಾಗಿದ್ದು ಅಲೆಗಳ ರಭಸಕ್ಕೆ ಕಾರು ಕೊಚ್ಚಿಹೋಗಿದೆ.

ಕುಂದಾಪುರದ ಕೋಟೇಶ್ವರ ಬಳಿಯಿಂದ ಬೈಂದೂರು ಕಡೆಗೆ ಕಾರು ತೆರಳುತ್ತಿತ್ತು ಎನ್ನಲಾಗಿದೆ. ಈ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.

ಈ ದುರ್ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರವಾಗಿ ಅಸ್ವಸ್ಥಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಟೇಶ್ವರ ಗ್ರಾಮದ ನಿವಾಸಿ 28 ರ ಹರೆಯದ ವೀರಾಜ್ ಆಚಾರ್ಯ ಹಾಗು 23 ವರ್ಷದ ರೋಶನ್ ಆಚಾರ್ಯ ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಕಾರಿನಲ್ಲಿ ಒಟ್ಟು ನಾಲ್ವರು ಪ್ರಯಾಣಿಸುತ್ತಿದ್ದು, ಈ ಪೈಕಿ ಮುಂದಿನ ಸೀಟಿನಲ್ಲಿ ಕೂತಿದ್ದ ಇಬ್ಬರು ನೀರು ಪಾಲಾಗಿದ್ದಾರೆ. ಬೈಂದೂರು ಅಗ್ನಿಶಾಮಕ ದಳದವರು ನಡೆಸಿದ ರಕ್ಷಣಾ ಕಾರ್ಯಚರಣೆಯಲ್ಲಿ ಹಿಬ್ಬಂದಿ ಸೀಟಿನಲ್ಲಿದ್ದ ಇನ್ನಿಬ್ಬರು ರಕ್ಷಿಸಲ್ಪಟ್ಟಿದ್ದಾರೆ. ಶನಿವಾರ ತಡ ರಾತ್ರಿ ಅಪಘಾತ ಸಂಭವಿಸಿದೆ.

ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಕಾರನ್ನು ಮೇಲಕ್ಕೆತ್ತುವ ಕಾರ್ಯಚರಣೆ ಕೈಗೊಂಡಿದ್ದಾರೆ. ಗಂಗೊಳ್ಳಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

You may also like

Leave a Comment