Home » ಮಂಗಳೂರು : KSRTC ಬಸ್ ನಿಲ್ದಾಣದಲ್ಲಿ ಶೌಚಾಲಯಕ್ಕೆಂದು ಹೋದ ಯುವತಿ ನಾಪತ್ತೆ!

ಮಂಗಳೂರು : KSRTC ಬಸ್ ನಿಲ್ದಾಣದಲ್ಲಿ ಶೌಚಾಲಯಕ್ಕೆಂದು ಹೋದ ಯುವತಿ ನಾಪತ್ತೆ!

by Mallika
0 comments

ಮಂಗಳೂರು : ಕೆಎಸ್‌ಆರ್‌ಟಿಸಿ ಬಸ್
ನಿಲ್ದಾಣದ ಶೌಚಾಲಯಕ್ಕೆಂದು ಹೋದ ಯುವತಿಯೋರ್ವಳು ನಾಪತ್ತೆಯಾಗಿರುವ ಘಟನೆಯೊಂದು ನಡೆದಿದೆ.

ದೀಪಿಕಾ (19) ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಆಕೆಯ ತಂದೆ ಹಾವೇರಿ ಹಾನಗಲ್ ತಾಲೂಕಿನ ಹಾನಗಲ್ ತಾಲೂಕಿನ ನಿವಾಸಿ ನಾಗರಾಜ್ ಫಕೀರಪ್ಪ ಗೊಲ್ಲರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ನಾಗರಾಜ್ ಫಕೀರಪ್ಪ ಗೊಲ್ಲರ ಅವರು ಮಂಡಿನೋವಿನ ಚಿಕಿತ್ಸೆಗಾಗಿ ಮಂಗಳೂರಿಗೆ ಪುತ್ರಿ ದೀಪಿಕಾ ಜತೆಯಲ್ಲಿ ಹೊರಟು ಜು. 2ರಂದು ಬೆಳಗ್ಗೆ 5 ಗಂಟೆಗೆ ಮಂಗಳೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ತಲುಪಿದ್ದರು. ಅಲ್ಲಿ ನಾಗರಾಜ್ ಪುರುಷರ ಶೌಚಾಲಯಕ್ಕೆ ತೆರಳಿದ್ದರು.

ದೀಪಿಕಾ ಮಹಿಳೆಯರ ಶೌಚಾಲಯಕ್ಕೆ ತೆರಳಿದ್ದರು. ನಾಗರಾಜ್ ಅವರು ಶೌಚಾಲಯದಿಂದ ಹೊರಗೆ ಬಂದು ದೀಪಿಕಾಳಿಗೆ ಕಾದು ಕುಳಿತರೂ ಆಕೆ ಬಂದಿರಲಿಲ್ಲ. ಬಸ್ ನಿಲ್ದಾಣದ ವಠಾರದಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ ಎಂದು ಬರ್ಕೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

You may also like

Leave a Comment