Home » ಮರವಂತೆ: ಸಮುದ್ರಕ್ಕೆ ಬಿದ್ದ ಕಾರು!! ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ-ಮುಗಿಲು ಮುಟ್ಟಿದ ಆಕ್ರಂದನ

ಮರವಂತೆ: ಸಮುದ್ರಕ್ಕೆ ಬಿದ್ದ ಕಾರು!! ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ-ಮುಗಿಲು ಮುಟ್ಟಿದ ಆಕ್ರಂದನ

0 comments

ಉಡುಪಿ:ಇಲ್ಲಿನ ಮರವಂತೆ ಸಮುದ್ರಕ್ಕೆ ಶನಿವಾರ ತಡರಾತ್ರಿ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರೊಂದರಲ್ಲಿ ನಾಪತ್ತೆಯಾಗಿದ್ದ ಯುವಕನೋರ್ವನ ಮೃತದೇಹ ತೀವ್ರ ಶೋಧ ಕಾರ್ಯದ ಬಳಿಕ ತ್ರಾಸಿ ಬಳಿಯ ಹೊಸಕೋಟೆ ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ.

ಮೃತ ಯುವಕನನ್ನು ರೋಷನ್ ಆಚಾರ್ಯ ಎಂದು ಗುರುತಿಸಲಾಗಿದೆ. ಶನಿವಾರ ತಡರಾತ್ರಿ ಕುಂದಾಪುರದಿಂದ ಬೈಂದೂರು ಕಡೆಗೆ ಚಲಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮರವಂತೆ ಸಮುದ್ರಕ್ಕೆ ಬಿದ್ದಿತ್ತು.

ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಇನ್ನೋರ್ವ ನಾಪತ್ತೆಯಾಗಿ ಇಬ್ಬರು ಗಾಯಗೊಂಡಿದ್ದರು. ನಾಪತ್ತೆಯಾಗಿದ್ದ ಯುವಕನ ಪತ್ತೆಗೆ ಶೋಧ ಕಾರ್ಯ ಮುಂದುವರಿದು, ಜುಲೈ 04ರ ಸೋಮವಾರ ಮೃತದೇಹ ಪತ್ತೆಯಾಗಿದೆ.

You may also like

Leave a Comment