ಈಗ ಎಲ್ಲರೂ ಸಂಚಾರಕ್ಕೆ ಓಲಾ, ಉಬರ್ ಕ್ಯಾಬ್ ಬುಕ್ ಮಾಡುವುದು ಸಾಮಾನ್ಯ. ಆದರೂ ಈಗ ಪ್ರಯಾಣಿಕರು ಸ್ವಲ್ಪ ಜಾಗೃತೆ ವಹಿಸುವುದು ಒಳ್ಳೆಯದು. ಹಾಗಾದ್ರೆ ನೀವು ಇಂತಹ ವಿಷಯಗಳ ಬಗ್ಗೆ ಎಚ್ಚರವಾಗಿರಲೇಬೇಕು. ಏಕೆಂದರೆ, ಇಲ್ಲೊಂದು ಪ್ರಕರಣದಲ್ಲಿ ಡ್ರೈವರ್ ಗೆ ಓಟಿಪಿ ನಂಬರ್ ಹೇಳಲು ತಡಮಾಡಿದ್ದಕ್ಕೆ, ಪ್ರಾಣವೇ ತೆಗೆದಿದ್ದಾನೆ. ಹೌದು, ಇಂಥದ್ದೊಂದು ಘಟನೆ ನೆರೆ ರಾಜ್ಯ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಚೆನ್ನೈನಲ್ಲಿ ಕ್ಯಾಬ್ ಹತ್ತುವ ಮೊದಲು ಒಟಿಪಿಯನ್ನು ಒದಗಿಸುವಲ್ಲಿ ವಿಳಂಬವಾದ ಕಾರಣ ಪ್ರಯಾಣಿಕರನ್ನು ಕೊಂದು ಆರೋಪದ ಮೇಲೆ ಓಲಾ ಚಾಲಕನನ್ನು ಬಂಧಿಸಲಾಗಿದೆ.
ಓಟಿಪಿ ತಿಳಿಸುವ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ನಂತರ ಚಾಲಕ ವ್ಯಕ್ತಿಗೆ ಹಲವು ಬಾರಿ ಗುದ್ದಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಉಮೇಂದ್ರ ಎಂಬ ವ್ಯಕ್ತಿ ಕೊಯಮತ್ತೂರಿನ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ. ವಾರಾಂತ್ಯದಲ್ಲಿ ಸಂಬಂಧಿಕರನ್ನು ಭೇಟಿ ಮಾಡಲು ಅವರು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಚೆನ್ನೈನಲ್ಲಿದ್ದರು. ಭಾನುವಾರ ಈ ಕುಟುಂಬವು ಕೊಯಮತ್ತೂರು ಮಾಲ್‌ನಲ್ಲಿ ಚಲನಚಿತ್ರವನ್ನು ವೀಕ್ಷಿಸಿ ಮನೆಗೆ ಮರಳುತ್ತಿದ್ದಾಗ, ಅವರ ಪತ್ನಿ ಕ್ಯಾಬ್ ಬುಕ್ ಮಾಡಿದ್ದಾರೆ.
ಕ್ಯಾಬ್ ಬಂದಾಗ OTP ಯಲ್ಲಿ ಸ್ವಲ್ಪ ಲೇಟ್ ಆಗಿದೆ. ಈ ವೇಳೆ ಕ್ಯಾಬ್ ಚಾಲಕ, ಉಮೇಂದ್ರ ಅವರ ಪತ್ನಿ ಮತ್ತು ಮಕ್ಕಳನ್ನು ವಾಹನದಿಂದ ಕೆಳಗಿಳಿಸಿ ಮೊದಲು ಒಟಿಪಿಯನ್ನು ಖಚಿತಪಡಿಸಲು ಹೇಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಳಗೆ ಇಳಿಯುವಾಗ ಉಮೇಂದ್ರ ಕ್ಯಾಬ್‌ನ ಬಾಗಿಲು ಜೋರಾಗಿ ಹಾಕಿದ್ದೇ ಇಬ್ಬರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.
ಚಾಲಕನು ಮೊದಲು ತನ್ನ ಫೋನ್ ಅನ್ನು ಉಮೇಂದ್ರನತ್ತ ಎಸೆದು ನಂತರ ಆತನಿಗೆ ಹೊಡೆಯಲು ಪ್ರಾರಂಭಿಸಿದ್ದಾನೆ. ಚಾಲಕ ಪದೇ ಪದೇ ಗುದ್ದಿದ್ದರಿಂದ ಉಮೇಂದ್ರ ಕುಸಿದು ಬಿದ್ದಿದ್ದಾನೆ. ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರು ಅವರು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಕ್ಯಾಬ್ ಚಾಲಕನನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿದ್ದು ತನಿಖೆ ನಡೆಯುತ್ತಿದೆ.
