ಕೇರಳದಲ್ಲಿ ಇತ್ತೀಚೆಗೆ ಸೆಲೆಬ್ರಿಟಿಗಳ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ನಡೆಯಿತ್ತಿದೆ. ಈಗ ಇದರ ಮುಂದುವರಿದ ಭಾಗವಾಗಿ ಪ್ರಖ್ಯಾತ ಸಿನಿಮಾ ನಟನೊಬ್ಬನ ಮೇಲೆ ಫೋಕ್ಸೋ ಕಾನೂನಿನ ಮೂಲಕ ಪ್ರಕರ ದಾಖಲಾಗಿದೆ.
ಕೇರಳದ ಪಾಲಕ್ಕಾಡ್ನಲ್ಲಿ ಇಬ್ಬರು ಶಾಲಾ ಬಾಲಕಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಮಲಯಾಳಂ ನಟ, ಖಳನಟನಾಗಿ ಹೆಸರು ಮಾಡಿದ, ಶ್ರೀಜಿತ್ ರವಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
Thrissur, Kerala | Police arrest Malayalam actor Sreejith Ravi for alleged indecent conduct towards 2 minor girls in public, on July 4. Case registered under POCSO Act: Thrissur West Police
ಜುಲೈ 4 ರ ಸೋಮವಾರ ಅಯ್ಯಂತೊಳೆ ಎಸ್ಎನ್ ಪಾರ್ಕ್ನಲ್ಲಿ ಈ ಘಟನೆ ನಡೆದಿದೆ. ಶ್ರೀಜಿತ್ ರವಿ ವಿರುದ್ಧ ಕಠಿಣ ಪೋಕ್ಸ್ ಕಾನೂನು ಅಥವಾ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಶ್ರೀಜಿತ್ ರವಿ ವಿರುದ್ಧ ಅಶ್ಲೀಲ ಪ್ರಕರಣ ದಾಖಲಾಗಿರುವುದು ಇದೇ ಮೊದಲಲ್ಲ. 2016 ರಲ್ಲಿ ಪಾಲಕ್ಕಾಡ್ನಲ್ಲಿ ಇಂತಹದ್ದೆ ಪ್ರಕರಣ ದಾಖಲಾಗಿತ್ತು.ಆ ವೇಳೆ ಅವರಿಗೆ ಜಾಮೀನು ನೀಡಲಾಗಿತ್ತು. ಈ ಪ್ರಕರಣ ಬಹಳ ಕೌತುಕವಾಗಿದ್ದು ಮುಂದೇನಾಗುತ್ತೇ ಎಂಬ ಕುತೂಹಲ ಮೂಡಿಸಿದೆ.