Home » ಬೆಳ್ತಂಗಡಿ : ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಸ್ವಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ!

ಬೆಳ್ತಂಗಡಿ : ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಸ್ವಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ!

0 comments

ಬೆಳ್ತಂಗಡಿ : ಪ್ರಸಿದ್ಧ ಸ್ವಉದ್ಯೋಗ ತರಬೇತಿ ಕೇಂದ್ರಗಳಲ್ಲಿ ಒಂದಾದ ಉಜಿರೆಯ ರುಡ್ ಸೆಟ್ ಸಂಸ್ಥೆಯಿಂದ ಹೈನುಗಾರಿಕೆ, ಎರೆಹುಳ ಗೊಬ್ಬರ ತಯಾರಿಕೆ ಹಾಗೂ ಮಹಿಳೆಯರಿಗಾಗಿ ಬ್ಯೂಟಿ ಪಾರ್ಲರ್ ತರಬೇತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹೈನುಗಾರಿಕೆ ಮತ್ತು ಎರೆಹುಳ ಗೊಬ್ಬರ ತಯಾರಿಕೆ ತರಬೇತಿ 10 ದಿನಗಳ ಕಾಲದ್ದಾಗಿದ್ದು, ದಿನಾಂಕ 20-07-2022ರಿಂದ ಆರಂಭಗೊಂಡು ದಿನಾಂಕ 29-07-2022ರವರೆಗೆ ನಡೆಯಲಿದೆ. ಇನ್ನೂ ಮಹಿಳೆಯರಿಗೆ ಬ್ಯೂಟಿ ಪಾರ್ಲರ್ ತರಬೇತಿಯು 30 ದಿನಗಳ ಕಾಲ ನೀಡಲಾಗುತ್ತದೆ. ಈ ತರಬೇತಿ ದಿನಾಂಕ 21-07-2022 ರಿಂದ ಆರಂಭಗೊಂಡು ದಿನಾಂಕ 19-08-2022ರವರೆಗೆ ನಡೆಯಲಿದೆ.

ಈ ತರಬೇತಿಗೆ 18 ರಿಂದ 45 ವರ್ಷ ವಯೋಮಾನದವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಇದಲ್ಲದೇ ಸಂಸ್ಥೆಯ ಸಮವಸ್ತ್ರ ಮತ್ತು ಉದ್ಯೋಗ ಕೈಗೊಳ್ಳಲು ಟೂಲ್ ಕಿಟ್ ಕೂಡ ಉಚಿತವಾಗಿ ನೀಡಲಾಗುತ್ತದೆ. ಹಾಗೆಯೇ ಬ್ಯಾಂಕ್ ನಿಂದ ಸಿಗುವ ಸಾಲದ ಬಗ್ಗೆಯೂ ಸಂಸ್ಥೆ ಮಾಹಿತಿ ನೀಡಲಿದೆ.

ರೇಷನ್ ಕಾರ್ಡ್ ಜೆರಾಕ್ಸ್ ಪ್ರತಿ, 4 ಪಾಸ್ ಪೋರ್ಟ್ ಸೈಜ್ ಪೋಟೋ, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯೊಂದಿಗೆ, ಸಂಪೂರ್ಣ ಮಾಹಿತಿಯನ್ನು ಒಳಗೊಂಡ ಅರ್ಜಿಯನ್ನು ರುಡ್ ಸೆಟ್ ಸಂಸ್ಥೆ, ಉಜಿರೆ, ದಕ್ಷಿಣ ಕನ್ನಡ ಜಿಲ್ಲೆ –574240ಗೆ ಕಳುಹಿಸಿ.

ಹೆಚ್ಚಿನ ಮಾಹಿತಿಗಾಗಿ :
ರುಡ್ ಸೆಟ್ ಸಂಸ್ಥೆಯ 9591044014, 9902594791, 9900793675, 9448484237, 9980885900 ಗೆ ಕರೆ ಮಾಡಿ ಪಡೆಯಬಹುದಾಗಿದೆ. ಕರೆ ಮಾಡಲು ಬೆಳಿಗ್ಗೆ 9.30ರಿಂದ ಸಂಜೆ 6 ಗಂಟೆಯ ಒಳಗೆ ಮಾತ್ರ ಅವಕಾಶ.

You may also like

Leave a Comment