Home » ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಪೆಟ್ರೋಲ್​ ನಿಷೇಧ!

ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಪೆಟ್ರೋಲ್​ ನಿಷೇಧ!

0 comments

ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಪೆಟ್ರೋಲ್​ ನಿಷೇಧಿಸಲಾಗುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್​ ಗಡ್ಕರಿ ಶಾಕಿಂಗ್‌ ಹೇಳಿಕೆ ಹೇಳಿದ್ದಾರೆ.

ಮಹಾರಾಷ್ಟ್ರದ ವಿದರ್ಭ ಜಿಲ್ಲೆಯಲ್ಲಿ ತಯಾರಾಗುತ್ತಿರುವ ಜೈವಿಕ ಎಥೆನಾಲ್ ಅನ್ನು ವಾಹನಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಗ್ರೀನ್ ಹೈಡ್ರೋಜನ್ (ಹಸಿರು ಜಲಜನಕ) ಅನ್ನು ಕೂಡಾ ತಯಾರಿಸಬಹುದಾಗಿದ್ದು, ಇದನ್ನು ಪ್ರತಿ ಕೆಜಿಗೆ 70 ರೂಪಾಯಿಗೆ ಮಾರಾಟ ಮಾಡಬಹುದು. ಇನ್ನು ಮುಂದಿನ ಐದು ವರ್ಷಗಳಲ್ಲಿ ಪೆಟ್ರೋಲ್ ಅಭಾವ ತಲೆದೋರಲಿದ್ದು, ಈ ನಿಟ್ಟಿನಲ್ಲಿ ದೇಶದಲ್ಲಿ ಪೆಟ್ರೋಲ್ ನಿಷೇಧಿಸಿ ಹಸಿರು ಹೈಡ್ರೋಜನ್ ಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಗೌರವ ಡಾಕ್ಟರೇಟ್​ ಪದವಿ ಸ್ವೀಕರಿಸಿದ ಬಳಿಕ ಮಾತನಾಡಿದ ಕೇಂದ್ರ ಸಚಿವ ನಿತಿನ್​ ಗಡ್ಕರಿ, ನಮ್ಮ ದೇಶದ ರೈತರು ಕೇವಲ ಅಕ್ಕಿ , ಗೋಧಿ ಹಾಗೂ ಜೋಳದ ಇಳುವರಿಯನ್ನೇ ಮಾಡುತ್ತಿದ್ದರೆ ಅವರು ಭವಿಷ್ಯದಲ್ಲಿಯೂ ಮುಂದೆ ಬರಲು ಸಾಧ್ಯವಿಲ್ಲ. ರೈತರು ಕೇವಲ ಆಹಾರ ಪೂರೈಕೆದಾರರು ಮಾತ್ರ ಆಗದೇ ಇಂಧನ ಪೂರೈಕೆದಾರರೂ ಆಗಬೇಕು ಎಂದು ಕರೆ ನೀಡಿದರು.

You may also like

Leave a Comment